Wednesday, August 10, 2022

Latest Posts

ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್: 81 ರನ್ ಗೆ ಒಲ್ಲಿ ಔಟ್, 9 ನೇ ವಿಕೆಟ್ ಕಳೆದುಕೊಂಡ ಆಂಗ್ಲರು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 191 ರನ್‌ಗಳಿಗೆ ಆಲೌಟ್ ಆಗಿದ್ದು,ಎರಡನೇ ದಿನ ಇಂದು ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ನಡೆಸುತ್ತಿದೆ.
ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಸದ್ಯಕ್ಕೆ 78 ಓವರ್ ಗೆ 9 ವಿಕೆಟ್​ ನಷ್ಟಕ್ಕೆ 257 ರನ್ ಗಳಿಸಿ, 66 ರನ್ ಮುನ್ನಡೆ ಸಾಧಿಸಿದೆ.
ಇದೀಗ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಒಲ್ಲಿ ಪೋಪ್ 81 ರನ್ ಗಳಿಸಿ ಔಟಾಗಿದ್ದಾರೆ. ಇದರ ಬೆನ್ನಲ್ಲೇ ಒಲ್ಲಿ ರಾಬಿನ್ಸನ್ ಜಡೇಜಾ ಬೌಲಿಂಗ್ ಗೆ ಔಟಾಗಿ ಪೆವಿಲಿಯನ್ ನತ್ತ ಮುಖಮಾಡಿದ್ದಾರೆ. ಸದ್ಯ ವಕ್ಸ್ ಮತ್ತು ಅಡ್ರೆಸನ್ ಪಿಚ್​ನಲ್ಲಿದ್ದಾರೆ.
ಜಸ್ಪ್ರೀತ್ ಬೂಮ್ರಾ 2 ವಿಕೆಟ್ ಪಡೆದಿದ್ದು, ಇಂದು ಉಮೇಶ್ ಯಾದವ್ 3 ವಿಕೆಟ್ ಉರುಳಿಸಿದ್ದು, ಜಡೇಜಾ ಕೂಡ 2 ವಿಕೆಟ್ ಪಡೆದಿದ್ದು, ಸಿರಾಜ್ ಹಾಗೂ ,ಠಾಕೂರ್ 1 ವಿಕೆಟ್ ಪಡೆದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss