Wednesday, August 17, 2022

Latest Posts

ಭಾರತ- ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​​ ಪಂದ್ಯ: ಅರ್ಧಶತಕ ಸಿಡಿಸಿದ ಪೂಜಾರ, ಇಂಡಿಯಾ 1 ವಿಕೆಟ್ ನಷ್ಟಕ್ಕೆ 206 ರನ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ- ಇಂಗ್ಲೆಂಡ್​ ನಾಲ್ಕನೇ ಟೆಸ್ಟ್​​ ಪಂದ್ಯದ ಮೂರನೇ ದಿನವಾದ ಇಂದು ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ ಅಲ್ಲಿ ಉತ್ತಮ ಆಟವಾಡುತ್ತಿದ್ದು, ರೋಹಿತ್​ ಭರ್ಜರಿ ಶತಕ ಸಿಡಿಸಿದ ಬೆನ್ನಲ್ಲೇ ಇತ್ತ ಪೂಜಾರ ಕೂಡ ಅರ್ಧಶತಕ ಪೂರೈಸಿದ್ದಾರೆ.
ಇಂದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ, ಇಂಗ್ಲೆಂಡ್​ ಬೌಲರ್ ಗಳನ್ನು ಕಾಡಿದರು. ಈ ವೇಳೆ ಆರಂಭಿಕ ರಾಹುಲ್ 46 ರನ್ ಗಳಿಸಿ ಔಟಾದರು.
ಬಳಿಕ ರೋಹಿತ್​- ಪೂಜಾರ ಜೋಡಿ ಉತ್ತಮ ಜೊತೆಯಾಟವಾಡಿದರು. ರೋಹಿತ್​ ಅಮೋಘ ಶತಕ ಸಿಡಿಸಿದ ಮಿಂಚಿದರು. ಈ ವೇಳೆ ಫಾರ್ಮ್ ಗೆ ಮರಳಿದ ಪೂಜಾರ ಕೂಡ ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು.
ಸದ್ಯ ಭಾರತ ಒಂದು ವಿಕೆಟ್ ಕಳೆದುಕೊಂಡು 206 ರನ್ ಗಳಿಸಿ ಬ್ಯಾಟಿಂಗ್ ನಡೆಸುತ್ತಿದೆ. 107 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ. ರೋಹಿತ್​ ಶರ್ಮಾ ​ ಹಾಗೂ ಪೂಜಾರ ಇಂಗ್ಲೆಂಡ್​ ಬೌಲರ್ ಗಳನ್ನು ದಿಟ್ಟವಾಗಿ ಎದುರಿಸುತ್ತಿದ್ದಾರೆ.
ಮೊದಲ ಇನ್ನಿಂಗ್ಸ್​​​ನಲ್ಲಿ ಇಂಗ್ಲೆಂಡ್​ ತಂಡ 290ರನ್​ ಗಳಿಕೆ ಮಾಡುವ ಮೂಲಕ 99 ರನ್​ಗಳ ಮುನ್ನಡೆ ಸಾಧಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!