Thursday, August 18, 2022

Latest Posts

ಕಂದಹಾರ್ ತ್ಯಜಿಸಿದ ಭಾರತೀಯ ರಾಜತಾಂತ್ರಿಕರು: ಚೀನಾ ನಮ್ಮ ಸ್ನೇಹಿತ ಎನ್ನುತ್ತಿದ್ದಾರೆ ತಾಲಿಬಾನಿಗಳು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:
ಕಂದಹಾರ್ ಪ್ರದೇಶವನ್ನು ತಾಲೀಬಾನ್ ಉಗ್ರರು ವಶಪಡಿಸಿಕೊಂಡ ಬಳಿಕ ಭಾರತ ಸುಮಾರು 50 ರಾಜತಾಂತ್ರಿಕರು ಹಾಗೂ ಭದ್ರತಾ ಸಿಬ್ಬಂದಿಯನ್ನು ಭಾರತ ಸ್ಥಳಾಂತರಿಸಿದೆ.
ಇನ್ನೊಂದೆಡೆ ಅಮೆರಿಕ ಪಡೆಗಳು ಕಾಲ್ಕಿತ್ತ ನಂತರ ಪ್ರಬಲವಾಗುತ್ತಿರುವ ತಾಲಿಬಾನ್ ಪಡೆಗಳು ಈಗ ಚೀನಾ ತನ್ನ ಸ್ನೇಹಿತ ಎಂಬ ರಾಗ ಹಾಡುತ್ತಿವೆ. “ಚೀನಾ ಅಫ್ಘಾನಿಸ್ತಾನದ ಸ್ನೇಹಿತ. ಯುದ್ಧ ಪೀಡಿತ ದೇಶಗಳಿಗೆ ಪುನರ್ ನಿರ್ಮಾಣ ನಡೆಸಲು ಚೀನಾ ಹೂಡಿಕೆ ಮಾಡುವ ನಿರೀಕ್ಷೆ ಇದೆ” ಎಂದು ತಾಲಿಬಾನ್ ತಿಳಿಸಿದೆ.
ತಮ್ಮ ಹಿಡಿತದಲ್ಲಿರುವ ಶೇ.85ರಷ್ಟು ಭೂಮಿಯಲ್ಲಿ ಚೀನಾದ ಹೂಡಿಕೆದಾರರು, ಕಾರ್ಮಿಕರ ಸುರಕ್ಷತೆಯನ್ನು ಕಾಪಾಡಲಾಗುತ್ತದೆ ಎಂದು ತಾಲಿಬಾನ್ ಭರವಸೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!