Sunday, June 26, 2022

Latest Posts

ಇಂದು ಕಾಬೂಲ್ ನಿಂದ 180 ಮಂದಿ ಭಾರತಕ್ಕೆ ಬರುವ ನಿರೀಕ್ಷೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ಅಫ್ಘಾನಿಸ್ಥಾನದಿಂದ 180 ಮಂದಿ ಭಾರತೀಯ ಸೇನಾ ವಿಮಾನದಲ್ಲಿ ಭಾರತಕ್ಕೆ ಕರೆತರುವ ಸಾಧ್ಯತೆ ಇದೆ.
ಅಮೆರಿಕದ ಸೇನೆಯನ್ನು ಅಫ್ಘಾನ್ ನಿಂದ ಹಿಂಪಡೆಯಲು ತಾಲಿಬಾನ್ ಆ.31ರ ಗಡುವು ನೀಡಿದ್ದು, ಈ ವೇಳೆಗೆ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ನಾಗರಿಕರನ್ನು ಅಫ್ಘಾನಿಸ್ಥಾನದಿಂದ ವಾಪಸ್ ಕರೆತರಲು ಶ್ರಮಿಸುತ್ತಿದೆ.
180 ಜನರನ್ನು ಹೊತ್ತ ವಿಮಾನ ಇಂದು ಬೆಳಿಗ್ಗೆ ದೆಹಲಿ ತಲುಪುವ ನಿರೀಕ್ಷೆ ಇದ್ದು, ಈ ವಿಮಾನದಲ್ಲಿ ಭಾರತೀಯರು ಮಾತ್ರವಲ್ಲದೆ ಅಫ್ಘಾನಿಸ್ಥಾನದ‌ ಹಿಂದೂ ಮತ್ತು ಸಿಖ್ ಸಮುದಾಯದವರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತದ ‘ಆಪರೇಷನ್‌ ದೇವಿ ಶಕ್ತಿ’ ಮಿಷನ್‌ ಅಡಿಯಲ್ಲಿ ಈಗಾಗಲೇ 800 ಜನರನ್ನು ಭಾರತಕ್ಕೆ ಕರೆತರಲಾಗಿದೆ. ಕಳೆದ ಒಂದು ವಾರದಿಂದ ಸಾವಿರಾರು ಅಫ್ಘಾನಿಗಳು ರಕ್ಷಣೆ ಕೋರಿ ಕಾಬೂಲ್ ವಿಮಾನ ನಿಲ್ದಾಣದಲ್ಲಿಯೇ ಬೀಡುಬಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss