ಭಾರತವು ಶ್ರೀಲಂಕಾಗೆ ಸಹಾಯ ಮಾಡುವತ್ತ ಗಮನ ಕೊಟ್ಟಿದೆ: ವಿದೇಶಾಂಗ ಸಚಿವ ಎಸ್.‌ ಜೈಶಂಕರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಭಾನುವಾರ ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟನ್ನು “ಗಂಭೀರ ವಿಷಯ” ಎಂದು ಕರೆದಿದ್ದಾರೆ ಮತ್ತು ಈ ಸಮಯದಲ್ಲಿ ಭಾರತವು ಅವರಿಗೆ ಸಹಾಯ ಮಾಡುವತ್ತ ಗಮನ ಕೊಡುತ್ತಿದೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ‘ನೆರೆಹೊರೆ ಮೊದಲು’ ನೀತಿಯ ಪ್ರಕಾರ ನಮ್ಮ ನೆರೆಹೊರೆಯವರ ಅವಶ್ಯಕತೆಗಳನ್ನು ಪೂರೈಸುವ ರೀತಿಯಲ್ಲಿ ಭಾರತವು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಈ ಹಿಂದೆ ಶ್ರೀಲಂಕಾಕ್ಕೆ ಲೈನ್‌ ಆಫ್‌ ಕ್ರೆಡಿಟ್‌ ಮೂಲಕ ಸಾಲದ ಸಹಾಯವನ್ನು ನೀಡಿದ್ದು ಇದು ಕಳೆದ ಹಲವಾರು ತಿಂಗಳುಗಳಿಂದ ಅಗತ್ಯ ಸರಕುಗಳನ್ನು ಖರೀದಿಸಲು ಅವರಿಗೆ ಸಹಾಯ ಮಾಡಿದೆ ಎಂದ ಜೈ ಶಂಕರ್‌ “ನಾವು ಇಂಧನ ಖರೀದಿಗೂ ಸಹ ಅವರಿಗೆ ಲೈನ್‌ ಆಫ್‌ ಕ್ರೆಡಿಟ್‌ ಅನ್ನು ಒದಗಿಸಿದ್ದೇವೆ. ಈ ವರ್ಷವೇ, ನಾವು ಶ್ರೀಲಂಕಾಕ್ಕೆ $ 3.8 ಶತಕೋಟಿ ಬೆಂಬಲವನ್ನು ನೀಡಿದ್ದೇವೆ” ಎಂದಿದ್ದಾರೆ.

ಈ ನಡುವೆ ಭಾರತವು ಶ್ರೀಲಂಕಾಗೆ ಸೇನೆಯನ್ನು ಕಳಿಸುತ್ತದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ವಿದೇಶಾಂಗ ಸಚಿವಾಲಯ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!