ಶ್ರೀಲಂಕಾ ಪೊಲೀಸರಿಗೆ 125 ಎಸ್ ಯುವಿ ಹಸ್ತಾಂತರಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ನೆರವು ಮುಂದುವರೆಸಿರುವ ಭಾರತ, ಅಲ್ಲಿನ ಪೊಲೀಸರು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳ ಭಾಗವಾಗಿ ಭಾರತವು ಶ್ರೀಲಂಕಾ ಪೊಲೀಸರಿಗೆ 125 ಎಸ್‌ಯುವಿ ವಾಹನಗಳನ್ನು ಹಸ್ತಾಂತರಿಸಿದೆ.
ಇತಿಹಾಸದಲ್ಲೇ ಕೆಟ್ಟ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಕ್ಕೆ ಸಹಾಯ ಮಾಡಲು ಭಾರತವು ತನ್ನ ‘ನೆರೆಹೊರೆಯವರಿಗೆ ನೆರವು’ ನೀತಿಯ ಭಾಗವಾಗಿ ಕಳೆದ 12 ತಿಂಗಳುಗಳಲ್ಲಿ ಶ್ರೀಲಂಕಾಕ್ಕೆ ಬಹುಮುಖಿ ಸಹಾಯವನ್ನು ವಿಸ್ತರಿಸಿದೆ.
ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಗುರುವಾರ ಅಧಿಕೃತ ಸಮಾರಂಭದಲ್ಲಿ ಶ್ರೀಲಂಕಾ ಪೊಲೀಸರಿಗೆ 125 ಎಸ್‌ಯುವಿಗಳನ್ನು ಹಸ್ತಾಂತರಿಸಿದರು.
ಟ್ವಿಟರ್‌ನಲ್ಲಿ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಇನ್ನೂ 375 ಎಸ್‌ಯುವಿಗಳನ್ನು ಕೊಲಂಬೊಗೆ ಕಳುಹಿಸಲಾಗುವುದು ಎಂದು ಹೇಳಿದೆ.
ಆಹಾರ, ಔಷಧಗಳು, ಇಂಧನ ಮತ್ತು ಸೀಮೆಎಣ್ಣೆಯಂತಹ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಶ್ರೀಲಂಕಾದ ಆಹಾರ, ಆರೋಗ್ಯ ಮತ್ತು ಶಕ್ತಿಯ ಭದ್ರತೆಯನ್ನು ಸುರಕ್ಷಿತಗೊಳಿಸಲು ಬಾರತವು ಈ ವರೆಗೆ  ಸುಮಾರು 4 ಶತಕೋಟಿ ಬಿಲಿಯನ್‌ ಡಾಲರ್ ಆರ್ಥಿಕ ನೆರವನ್ನು ಒದಗಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!