ಚೀನಾದ ಮಂದಗತಿಯಲ್ಲಿ ಭಾರತಕ್ಕೊಂದು ಅವಕಾಶವಿದೆ- ಆನಂದ ಮಹೀಂದ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಚೀನಾದ ಬಂಧಗಳನ್ನು ನಾವು ಬಿಡಿಸಿಕೊಂಡಷ್ಟೂ ಒಳ್ಳೆಯದು.” ಇದು ದೇಶದ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಮಾತು.
ಅವರು ಈ ಮಾತುಗಳನ್ನು ಹೇಳಿರುವುದು ಯಾವುದೇ ಜಾಗತಿಕ ರಾಜಕಾರಣದ ಹಿನ್ನೆಲೆಯಲ್ಲಲ್ಲ, ಬದಲಿಗೆ ಶುದ್ಧ ವ್ಯಾಪಾರ ದೃಷ್ಟಿಕೋನದಿಂದ. ಮಹೀಂದ್ರಾ ಆಂಡ್ ಮಹೀಂದ್ರಾದ 76ನೇ ವಾರ್ಷಿಕ ಸಾಧಾರಣ ಸಭೆಯಲ್ಲಿ ಮಾತನಾಡುತ್ತ ಅವರು ಹೇಳಿದ್ದೇನೆಂದರೆ- “ಜಗತ್ತು ತನ್ನ ಪೂರೈಕೆ ಸರಪಳಿಯಲ್ಲಿ ಚೀನಾ ಹೊರತಾದ ಮೂಲವನ್ನು ಹುಡುಕುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರ ಲಾಭವನ್ನು ಭಾರತ ಪಡೆಯಬಹುದಾಗಿದೆ.”
ಸ್ವತಃ ಬಹುದೊಡ್ಡ ವಾಹನ ಉತ್ಪಾದನೆ ಕಾರ್ಖಾನೆಗಳನ್ನು ಹೊಂದಿರುವ ಆನಂದ್ ಮಹೀಂದ್ರಾ, ಜಾಗತಿಕ ವಹಿವಾಟಿನಲ್ಲಾಗುತ್ತಿರುವ ಬದಲಾವಣೆಯನ್ನು ಹೀಗೆ ಗುರುತಿಸಿದ್ದಾರೆ. “ಚೀನಾದಲ್ಲಿರುವ 60 ಶೇಕಡ ಕಂಪನಿಗಳು ಮತ್ತು 80 ಶೇಕಡ ಉತ್ಪಾದನಾ ಘಟಕಗಳು ಹಿಂಜರಿತವನ್ನು ಅನುಭವಿಸುತ್ತಿವೆ. ಇಂಥದೊಂದು ನಿರ್ವಾತವನ್ನು ಯಾರಾದರೂ ತುಂಬಲೇಬೇಕು. ಈ ನಿಟ್ಟಿನಲ್ಲಿ ಭಾರತ ಮುಂಚೂಣಿಯಲ್ಲಿರಬೇಕು” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!