ಸಕ್ಕರೆ ರಫ್ತಿನಲ್ಲಿ ಜಗತ್ತಿನ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಕ್ಕರೆ ರಫ್ತಿನಲ್ಲಿ ಜಗತ್ತಿನಲ್ಲೇ ಎರಡನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. 2021ರ ಅಕ್ಟೋಬರಿನಿಂದ ಪ್ರಾರಂಭಿಸಿ 2022ರ ಸೆಪ್ಟೆಂಬರ್ ವರೆಗಿನ ಸಕ್ಕರೆ ಋುತುವಿನಲ್ಲಿ ಐದು ಸಾವಿರ ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚು ಕಬ್ಬು ಉತ್ಪಾದಿಸಲಾಗಿದೆ. 3574 ಲಕ್ಷ ಮೆಟ್ರಿಕ್ ಟನ್‌ನಷ್ಟು ಕಬ್ಬಿನಲ್ಲಿ 394 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಉತ್ಪಾದಿಸಲಾಗಿದೆ.

35 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ದ್ರವ್ಯವನ್ನು ಎಥೆನಾಲ್ ಉತ್ಪಾದನೆಗೆ ಬಳಸಲಾಗಿದೆ. ಇದರೊಂದಿಗೆ ಭಾರತವು ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ಮತ್ತು ಗ್ರಾಹಕನಾಗಿ ಹೊರಹೊಮ್ಮಿದೆ ಮತ್ತು ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ರಫ್ತುದಾರನಾಗಿದೆ.

ಭಾರತದ ಸಕ್ಕರೆ ವಲಯಕ್ಕೆ ಇದು ದಾಖಲೆಯ ಕಾಲವೆಂದೇ ಸಾಬೀತಾಗಿದೆ. ಕಬ್ಬಿನ ಉತ್ಪಾದನೆ, ಸಕ್ಕರೆ ಉತ್ಪಾದನೆ, ಸಕ್ಕರೆ ರಫ್ತು, ಕಬ್ಬು ಸಂಗ್ರಹಣೆ ಹಾಗೂ ಎಥೆನಾಲ್ ಉತ್ಪಾದನೆಯನ್ನು ಈ ಸಮಯದಲ್ಲಿ ಮಾಡಲಾಗಿದೆ. 109.8 ಎಲ್ ಎಂ ಟಿ ಸಕ್ಕರೆ ರಫ್ತಾಗಿರುವುದು ಸಹ ವಿಷೇಷ ಸಾಧನೆಯೇ. ಏಕೆಂದರೆ 2020-21ರ ಸಾಲಿನಲ್ಲಿದ್ದಂತೆ ಈ ಬಾರಿ ಸರ್ಕಾರದಿಂದ ರಫ್ತು ಹೆಚ್ಚಳಕ್ಕೆ ಯಾವುದೇ ವಿಶೇಷ ಹಣಕಾಸು ನೆರವುಗಳಿದ್ದಿರಲಿಲ್ಲ. ಈ ರಫ್ತಿನ ಪ್ರಮಾಣವು ಭಾರತಕ್ಕೆ ದೊರಕಿಸಿಕೊಟ್ಟಿರುವ ಮೊತ್ತ 40,000 ಕೋಟಿ ರುಪಾಯಿಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!