ರಷ್ಯದಿಂದ ತೈಲವಷ್ಟೇ ಅಲ್ಲ, ಪೆಟ್ರೊಲಿಯಂ ಉತ್ಪನ್ನಗಳ ಆಮದೂ ಹೆಚ್ಚು ಮಾಡಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಷ್ಯಾದಿಂದ ಭಾರತವು ಕಚ್ಚಾ ತೈಲವನ್ನು ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುತ್ತಿರುವ ವಿಚಾರ ಗೊತ್ತೇ ಇದೆ. ಇತ್ತೀಚಿನ ಬೆಳವಣಿಗೆಯೊಂದು ಈ ಉತ್ಪನ್ನಗಳ ಆಮದಿನ ಪ್ರಮಾಣ ಏರಿಕೆಯಾಗುತ್ತಿರುವುದನ್ನು ಸೂಚಿಸುತ್ತಿದೆ. ಕಚ್ಚಾ ತೈಲ ಮಾತ್ರವಲ್ಲದೇ ಸಂಸ್ಕರಿಸಿದ ಉತ್ಪನ್ನಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ರಷ್ಯಾದಿಂದ ತೈಲೋತ್ಪನ್ನಗಳ ಆಮದಿನಲ್ಲಿನ ಏರಿಕೆಯು ಮಧ್ಯಪ್ರಾಚ್ಯ ದೇಶಗಳ ಮೇಲೆ ತೈಲಕ್ಕಾಗಿ ಭಾರತದ ಅವಲಂಬನೆಯನ್ನು ಕುಗ್ಗಿಸಿದೆ.

ವೋರ್ಟೆಕ್ಸಾದ ವರದಿಯೊಂದರ ಪ್ರಕಾರ ರಷ್ಯಾದ ಸಂಸ್ಕರಿಸಿದ ಕಚ್ಚಾತೈಲಗಳ ಆಮದು ಹಿಂದಿನ ಮೂರು ವರ್ಷಗಳ ಸರಾಸರಿ ಆಮದಿಗಿಂತ ಮೂರುಪಟ್ಟು ಹೆಚ್ಚಾಗಿದೆ. ಜುಲೈ ತಿಂಗಳ ಆಮದಿನಲ್ಲಿ ಕೊಂಚ ಅಂದರೆ 5% ರಷ್ಟು ಇಳಿದು ದಿನಕ್ಕೆ 917,000 ಬ್ಯಾರಲ್‌ ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಮುಂಚೆ ಇದು 1.06ಮಿಲಿಯನ್‌ ಬ್ಯಾರೆಲ್‌ಗಳಷ್ಟಿತ್ತು. ಜುಲೈ ತಿಂಗಳ ಭಾರತದ ಒಟ್ಟೂ ಕಚ್ಚಾ ತೈಲ ಆಮದಿನಲ್ಲಿ ರಷ್ಯಾದ ತೈಲವು 19% ರಷ್ಟಿದೆ. ಜೂನ್‌ನಲ್ಲಿ ಈ ಪ್ರಮಾಣವು 20%. ದಷ್ಟಿತ್ತು.

ಮಧ್ಯ ಪ್ರಾಚ್ಯ ಗಲ್ಫ್ ದೇಶಗಳಿಂದ ಹಾಗೂ ಯುಎಸ್ ಮತ್ತು ಪಶ್ಚಿಮ ಆಫ್ರಿಕಾದಿಂದ ಭಾರತದ ಕಚ್ಚಾ ತೈಲ ಆಮದಿನಲ್ಲಿ 20%ದಷ್ಟು ಕುಸಿತವಾಗಿದ್ದು ಅದು ರಷ್ಯಾದ ಆಮದಿಗೆ ಸ್ಥಳಾಂತರಗೊಂಡಿದೆ ಎಂದು ವೋರ್ಟೆಕ್ಸಾದ ವರದಿ ಹೇಳಿದೆ. ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾದಿಂದ ಭಾರತಕ್ಕೆ ಆಮದಾಗುವ ಸಂಸ್ಕರಿಸಿದ ಉತ್ಪನ್ನಗಳ ಪ್ರಮಾಣವು 100,000 ಬಿಪಿಡಿಗೆ(ಬ್ಯಾರಲ್ಸ್‌ ಪರ್‌ ಡೇ)ಗೆ ಏರಿಕೆಯಾಗಿದೆ. ಇವುಗಳಲ್ಲಿ ಇಂಧನ ತೈಲವು 70% ದಷ್ಟಿದೆ. ನಂತರದ ಸ್ಥಾನಗಳಲ್ಲಿ ಜೈವಿಕ ಇಂಧನಗಳು ಮತ್ತು ದ್ವಿತೀಯ ದರ್ಜೆಯ ಸಂಸ್ಕರಿಸಿದ ತೈಲೋತ್ಪನ್ನಗಳಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!