ಭಾರತದಲ್ಲಿ ಪುರುಷರಿಗಿಂತ ಹೆಚ್ಚು ಉದ್ಯೋಗಸ್ಥ ಮಹಿಳೆಯರಿದ್ದಾರೆ: ವೀಬಾಕ್ಸ್ ಇಂಡಿಯಾ ಸ್ಕಿಲ್ಸ್ ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದಿ ವೀಬಾಕ್ಸ್ ಇಂಡಿಯಾ ಸ್ಕಿಲ್ಸ್ ವರದಿಯ ಪ್ರಕಾರ ಕಳೆದ ಒಂದು ವರ್ಷದಲ್ಲಿ ಭಾರತೀಯರ ಉದ್ಯೋಗಾವಕಾಶ ಹೆಚ್ಚಾಗಿದೆ. ಅದರ ಮೌಲ್ಯಮಾಪನದ ಪ್ರಕಾರ, ಅರ್ಧದಷ್ಟು ಅಭ್ಯರ್ಥಿಗಳು ಅಂದರೆ 50.3 ಶೇ. ದಷ್ಟು ಅಬ್ಯರ್ಥಿಗಳು ಉದ್ಯೋಗಸ್ಥರಾಗಿದ್ದಾರೆ. ಕಳೆದ ವರ್ಷ ಈ ಪ್ರಮಾಣವು 46.2 ಶೇಕಡಾದಷ್ಟಿತ್ತು.

ಈ ವರದಿಯು ಭಾರತದಾದ್ಯಂತ ವೀಬಾಕ್ಸ್ ನ್ಯಾಶನಲ್ ಎಂಪ್ಲಾಯಬಿಲಿಟಿ ಟೆಸ್ಟ್ (WNET) ತೆಗೆದುಕೊಂಡ 3.75 ಲಕ್ಷ ಅಭ್ಯರ್ಥಿಗಳು ಅಥವಾ ಫ್ರೆಶರ್‌ಗಳ ಮೌಲ್ಯಮಾಪನ ಮತ್ತು ಇಂಡಿಯಾ ಹೈರಿಂಗ್ ಇಂಟೆಂಟ್ ಸಮೀಕ್ಷೆಯ ಆರಂಭಿಕ ವೃತ್ತಿಜೀವನದ ಆವೃತ್ತಿಯಲ್ಲಿ 15 ಕ್ಕೂ ಹೆಚ್ಚು ವಿವಿಧ ಉದ್ಯಮಗಳಿಂದ ಹಾಗೂ 150 ಕಾರ್ಪೊರೇಷನ್‌ಗಳ ಭಾಗವಹಿಸುವಿಕೆಯ ಆಧಾರದಲ್ಲಿ ತಯಾರಾಗಿದೆ.

ಡೊಮೇನ್‌ಗಳಲ್ಲಿ, ಬಿ ಕಾಮ್, ಎಂಬಿಎ ಮತ್ತು ಬಿ ಫಾರ್ಮ್ ಪದವೀಧರರು ಹೆಚ್ಚು ಉದ್ಯೋಗಿಗಳಾಗಿದ್ದಾರೆ. ಆದರೆ, ಪಾಲಿಟೆಕ್ನಿಕ್ ಮತ್ತು ಎಂಸಿಎ ಪದವೀಧರರು ಕಡಿಮೆ ಉದ್ಯೋಗಾವಕಾಶವನ್ನು ಹೊಂದಿದ್ದರು ಎಂದು ವರದಿ ಸೂಚಿಸಿದೆ.

ಆಸಕ್ತಿಕರ ಅಂಶವೆಂದರೆ ಉದ್ಯೋಗಸ್ಥರ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. 52.8 ಶೇಕಡಾದಷ್ಟು ಮಹಿಳಾ ಉದ್ಯೋಗಿಗಳಿದ್ದರೆ 47.2 ಶೇಕಡಾದಷ್ಟು ಪುರುಷ ಉದ್ಯೋಗಿಗಳಿದ್ದಾರೆ.

“ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರ ಉದ್ಯೋಗಾವಕಾಶದಲ್ಲಿ ಸ್ಥಿರವಾದ ಏರಿಕೆಯು ಭಾರತದ ಅಭಿವೃದ್ಧಿಶೀಲ ಕಾರ್ಮಿಕ ಮಾರುಕಟ್ಟೆಯಲ್ಲಿ ಆಮೂಲಾಗ್ರ ಬದಲಾವಣೆಗಳ ಸಕಾರಾತ್ಮಕ ಸಂಕೇತವಾಗಿದೆ. ಕೆಲಸದಲ್ಲಿ ಮಹಿಳೆಯರ ಹೆಚ್ಚಿದ ಭಾಗವಹಿಸುವಿಕೆ 2023ರಲ್ಲಿ ಭಾರತದ ಬೆಳವಣಿಗೆಗೆ ಕೊಡುಗೆ ನೀಡುವ ಅಂಶವಾಗಿದೆ”ಎಂದು ವರದಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!