Tuesday, June 28, 2022

Latest Posts

ಚೀನಾದ ಐದು ಉತ್ಪನ್ನಗಳಿಗೆ ಭಾರತದ ಪ್ರತಿಬಂಧಾತ್ಮಕ ಸುಂಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಭಾರತವು ಚೀನಾದ ಐದು ಉತ್ಪನ್ನಗಳ ವಿರುದ್ಧ ಹೆಚ್ಚುವರಿ ಸುಂಕ ಹೇರಿದೆ. ಇದನ್ನು ಆಮದು ಸುರಿಯುವಿಕೆ ವಿರುದ್ಧದ ಪ್ರತಿಬಂಧಾತ್ಮಕ ಶುಲ್ಕ ಎಂದು ಅರ್ಥೈಸಲಾಗುತ್ತದೆ.
ಅಂದರೆ, ಯಾವ ಉತ್ಪನ್ನಗಳ ಅತಿಯಾದ ಆಮದು ಸ್ಥಳೀಯ ಉತ್ಪಾದನೆಗಳು ಬೆಲೆ ಕಳೆದುಕೊಳ್ಳುವಂತೆ ಮಾಡುತ್ತದೋ, ಅಂಥ ವಸ್ತುಗಳು ವಿದೇಶದಿಂದ ಬರಬೇಕಾದರೆ ಅತಿಹೆಚ್ಚಿನ ಬೆಲೆತೆತ್ತು ಬರುವಂತೆ ಮಾಡುವ ಉಪಕ್ರಮವಿದು.
ಕೇಂದ್ರದ ಪರೋಕ್ಷ ತೆರಿಗೆ ಮತ್ತು ಸುಂಕ ನಿಗಮವು ಕೈಗೊಂಡಿರುವ ಈ ಕ್ರಮದ ಅಂಡಿ ಕೆಲವು ಅಲುಮಿನಿಯಂ ಉತ್ಪನ್ನಗಳು ಹಾಗೂ ಇನ್ನು ಕೆಲವು ರಾಸಾಯನಿಕಗಳು ಸೇರಿವೆ ಎಂದು ತಿಳಿದುಬಂದಿದೆ.
ಜೆನಿವಾ ಮೂಲದ ವಿಶ್ವ ವ್ಯಾಪಾರ ಒಕ್ಕೂಟದ ನಿಬಂಧನೆಗೆ ಭಾರತ ಮತ್ತು ಚೀನಾಗಳೆರಡೂ ಸಹಿ ಹಾಕಿರುವ ದೇಶಗಳಾಗಿದ್ದು, ಅಲ್ಲಿನ ನಿಯಮಗಳ ಚೌಕಟ್ಟಿನಲ್ಲಿ ಮಾತ್ರವೇ ಇಂಥ ಕ್ರಮ ಕೈಗೊಳ್ಳಬಹುದಾಗಿದೆ.
2021ರ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 12.26 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನವನ್ನು ಭಾರತವು ಚೀನಾಕ್ಕೆ ರಫ್ತು ಮಾಡಿದ್ದರೆ, ಇದೇ ಅವಧಿಯಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವುದರ ಮೌಲ್ಯ 42.33 ಬಿಲಿಯನ್ ಡಾಲರ್. ಅಂದರೆ ಸುಮಾರು 30 ಬಿಲಿಯನ್ ಡಾಲರುಗಳಷ್ಟು ವಿನಿಮಯ ಕೊರತೆಯನ್ನು ಭಾರತ ಹೊಂದಿರುವುದು ಸ್ಪಷ್ಟ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss