ಹೊಸ ವಿಶ್ವ ವ್ಯವಸ್ಥೆಯತ್ತ ಹೆಜ್ಜೆಯಿಡುತ್ತಿದೆ ಭಾರತ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಲೋಕಸಭೆಯಲ್ಲಿ ಸೋಮವಾರ ರಾಷ್ಟ್ರಪತಿ ಭಾಷಣದ ಮೇಲೆ ವಂದನಾರ್ಪಣೆಗೆ ಉತ್ತರ ನೀಡಿದ ಪ್ರಧಾನಿ ಮೋದಿ , ಲತಾ ಮಂಗೇಶ್ಕರ್​ ಅವರ ನಿಧನ ಭಾರತದ ಧ್ವನಿಯನ್ನೇ ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರು.

ಕೊರೋನಾ ಅವಧಿಯ ಬಳಿಕ ಜಗತ್ತು ಹೊಸ ವ್ಯವಸ್ಥೆಯತ್ತ ಸಾಗಿದೆ. ಕೋವಿಡ್ ನಂತರ ಹೊಸ ವಿಶ್ವ ವ್ಯವಸ್ಥೆಯತ್ತ ಹೆಜ್ಜೆಯಿಡುತ್ತ ಭಾರತ ವಿಶ್ವ ನಾಯಕನಾಗಿ ಹೊರಹೊಮ್ಮಬೇಕು. ಈ ವಿಷಯದಲ್ಲಿ ನಾಯಕತ್ವದ ವಿಚಾರದಲ್ಲಿ ಭಾರತ ಹಿಂದೆ ಬೀಳಬೇಕಾಗಿಲ್ಲ. ಈ ಅವಕಾಶವನ್ನು ಭಾರತ ಕಳೆದುಕೊಳ್ಳಬಾರದು ಎಂದು ಪ್ರಧಾನಿ ಮೋದಿ ಹೇಳಿದರು.

ಸ್ವಾತಂತ್ರ್ಯಾನಂತರ ಬಡವರ ಎಲ್ಲಾ ಮನೆಗಳಿಗೆ ವಿದ್ಯುತ್​, ಗ್ಯಾಸ್​ ಸಂಪರ್ಕ ಕಲ್ಪಿಸಿದ್ದು ಸರ್ಕಾರ ಸಾಧನೆ ಪ್ರಧಾನಿ ಬಣ್ಣಿಸಿದರು.ಬಡವರ ಮನೆಗಳಲ್ಲಿ ಬೆಳಕು ಮೂಡಿದ್ದು, ಬಡವರ ಸಂತಸ ದೇಶದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಗ್ಯಾಸ್​ ಸಂಪರ್ಕ ಮಹಿಳೆಯರ ಸಂಕಷ್ಟ ದೂರ ಮಾಡಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್​ ನಾಯಕರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ,ಮಾತನಾಡಿದ ಪ್ರಧಾನಿ, ಕಾಂಗ್ರೆಸ್​ ತೆಲಂಗಾಣ, ಜಾರ್ಖಂಡ್​ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲಿ ತಿರಸ್ಕೃತವಾಗಿ ದೇಶದಿಂದಲೇ ಪಕ್ಷ ಮಾಯವಾಗುತ್ತಿದೆ. ಕೊರೋನಾ ವೇಳೆ ಜನರು ಎಲ್ಲಿದ್ದಾರೋ ಅಲ್ಲಿಯೇ ಇರಿ ಎಂದು ವಿಶ್ವಸಂಸ್ಥೆ ಹೇಳಿತ್ತು. ಆದರೆ, ಕಾಂಗ್ರೆಸ್​ ಮುಗ್ಧ ಜನರು, ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್​ ನೀಡಿ ಎಲ್ಲರನ್ನೂ ಒಕ್ಕಲೆಬ್ಬಿಸಿದ್ದರು. ಇದರಿಂದ ಉತ್ತರಾಖಂಡ, ಪಂಜಾಬ್​, ಮಹಾರಾಷ್ಟ್ರ ವಿವಿಧ ರಾಜ್ಯಗಳಲ್ಲಿ ಕೊರೋನಾ ಹೆಚ್ಚಳವಾಗಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಎಲ್ಲವೂ ಸರಿಯಾಗಿ ನಡೆಯುತ್ತಿರುವಾಗ ಜನರನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ರಾಷ್ಟ್ರೀಯ ಪಕ್ಷಜನರ ಜೀವದ ಜೊತೆ ಆಟವಾಡಿದೆ. ಕೇಂದ್ರ ಸಾಕಾರ ಜನರ ಒಳಿತಿಗಾಗಿ ನಿರ್ಬಂಧ ಹೇರಿದೆ ಎಂದು ಹೇಳಿದರು.

ಇಷ್ಟು ಉಪದೇಶಗಳನ್ನು ಮಾಡುವಾಗ ನಿಮಗೂ 50 ವರ್ಷಗಳ ಕಾಲ ಇಲ್ಲಿ ಕುಳಿತುಕೊಂಡಿರುವ ಭಾಗ್ಯವಿತ್ತು ಎಂಬುದನ್ನ ಮರೆತು ಬಿಡುತ್ತೀರಿ. ಇನ್ನು ನಾಗಾಲ್ಯಾಂಡ್ ಕಾಂಗ್ರೆಸ್ʼಗೆ ಮತ ಹಾಕಿ ಸುಮಾರು 24 ವರ್ಷಗಳಾಗಿವೆ. 28 ವರ್ಷಗಳಿಂದ ಗೋವಾ ನಿಮ್ಮನ್ನು ಒಪ್ಪಿಕೊಂಡಿಲ್ಲ. ತ್ರಿಪುರಾ ಮತ್ತು ಒಡಿಶಾ ಹಾಗೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪತನದ ಕುರಿತು ಪ್ರಧಾನಿ ಮೋದಿ ನೆನಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!