ಭಾರತ ಹೇಡಿಗಳ ದೇಶವಲ್ಲ, ಸಿಂಹ ಸೃಷ್ಟಿ ಮಾಡುವ ವೀರರ ಭೂಮಿ: ಚಕ್ರವರ್ತಿ ಸೂಲಿಬೆಲೆ

ಹೊಸದಿಗಂತ ವರದಿ, ಕಲಬುರಗಿ:

ಭಾರತ ದೇಶವು ಹೇಡಿಗಳ ದೇಶವಲ್ಲ,ಬದಲಾಗಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ ಸಾವಕ೯ರಂತಹ ಸಿಂಹಗಳ ದೇಶವಾಗಿದೆ ಎಂದು ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಅವರು ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಹಿಂದು ಜಾಗರಣ ವೇದಿಕೆ ಅಡಿಯಲ್ಲಿ 21 ದಿನಗಳ ಕಾಲ ಪ್ರತಿಷ್ಟಾಪನೆ ಮಾಡಲಾದ ಹಿಂದು ಮಹಾ ಗಣಪತಿ, ಕಲಬುರಗಿ ವತಿಯಿಂದ ಆಯೋಜಿಸಿದ್ದ ಸಾವಿರದ ಸಾವಕ೯ರ್ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಸಾವಕ೯ರ್ ಅವರ ದೂರದೃಷ್ಟಿಯಂತೆ ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿ ನೆಹರೂ ಅವರಿಗೆ ಇದ್ದಿದ್ದರೆ,ಈ ದೇಶದ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಬ್ರಿಟಿಷ್ ಆಡಳಿತದಲ್ಲಿ ಸಿಪಾಯಿ ದಂಗೆ ಎಂದು ಕರೆ ನೀಡಿದ್ದ,ಬ್ರಿಟಿಷರು, ಅದನ್ನು ವೀರ ಸಾವಕ೯ರ್ ಅವರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಹೆಸರಿಟ್ಟವರು. ಈ ಸಂಗ್ರಾಮದಿಂದಲೇ ಅನೇಕ ವೀರರು ಸ್ವಾತಂತ್ರ್ಯದ ಕಿಚ್ಚಿನಲ್ಲಿ ಧುಮುಕಿದರು ಎಂದರು.

ಮನೆ ಮನೆಗಳಲ್ಲಿ ಪ್ರತಿಷ್ಟಾಪನೆ ಮಾಡುತ್ತಿದ್ದ ಗಣೇಶ್, ನನ್ನು ಬೀದಿಗೆ ತಂದು ಸಾವ೯ಜನಿಕ ಉತ್ಸವವಾಗಿ ಮಾಡಿದ್ದು,ತಿಲಕರು. ಈ ದೇಶದಲ್ಲಿ ಯಾವುದಾದರೂ ಕೆಸ್ ವಿದೇಶದಲ್ಲಿ ನಡದಿದ್ದು ಇದ್ದರೆ,ಅದು ಸಾವಕ೯ರ್ ಅವರ ಕೆಸ ಆಗಿತ್ತು. ಯಾವ ದೇಶ ತನಗೋಸ್ಕರ ಯಾರಾದರೂ ಪ್ರಾಣ ಬಿಟ್ಟಿದ್ದು ನೆನಪು ಹಾರಿದರೇ,ಆ ದೇಶ ಖಂಡಿತಾ ಉದ್ದಾರವಾಗಲ್ಲಾ ಎಂದರು.

ಪ್ರತಿಯೊಬ್ಬ ದೇಶಭಕ್ತ ವೀರನಿಗೆ ಸಾವಕ೯ರ್ ಸ್ಪಷ೯ಮಿಯಾಗಿದ್ದರು.ಯುವಕರಿಗೆ ಪ್ರೇರಣೆ ನೀಡಲು ಅಭಿನವ ಭಾರತ ಎಂಬ ಯುವ ಸಂಘಟನೆ ಹುಟ್ಟು ಹಾಕಿ,ಅನೇಕರಿಗೆ ಸ್ವಾತಂತ್ರ್ಯದ ಕಿಚ್ಚಿನಲ್ಲಿ ಧುಮುಕುವ ಹಾಗೇ ಪ್ರೇರಣೆ ನೀಡಿದರು.

ಬ್ರಿಟಿಷರು ಶಡ್ಯಂತ್ರದಿಂದ ಸಾವಕ೯ರ್ ಅವರಿಗೆ ಎರಡು ಜೀವಾವಧಿ ಶಿಕ್ಷೆ ನೀಡಿ,ಅಂಡಮಾನ್ ಸೆಲ್ಯೂಲರ್ ಜೈಲಿಗೆ ಅಟ್ಟಿದರು. ಹಿಂದೂತ್ವಕ್ಕೆ ಗೌರವ ಕೊಡದಿದ್ದರೆ ಇನ್ನೂಮುಂದೆ ನಡೆಯೋದಿಲ್ಲ ಎಂದರು. ನಿಜವಾಗಿಯೂ ಸ್ವಾತಂತ್ರ್ಯ ವೀರ ಸಾವಕ೯ರ್ ಬಗ್ಗೆ ಅರಿವು ಮೂಡಿಸಿದ್ದು,ಸಿದ್ದರಾಮಯ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷ ಚಾಮರಾಜ ದೊಡ್ಡಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಹಾಗೂ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಾಡೆ, ಕ್ರೇಡೆಲ್ ಅಧ್ಯಕ್ಷ ಚಂದು ಪಾಟೀಲ್, ನಿತೀನ್ ಗುತ್ತೇದಾರ, ಜಗದೀಶ್ ಕಟ್ಟಿಮನಿ, ರಾಮು ರೆಡ್ಡಿ, ಅಶೋಕ್ ಮಾನಕರ್, ಶಿವರಾಜ್ ಸಂಗೋಳಗಿ, ಅಶ್ವಿನಕುಮಾರ, ಪ್ರಶಾಂತ್ ಗುಡ್ಡಾ, ಸತೀಶ ಮಾಹೂರ, ಉಮೇಶ್ ಪಾಟೀಲ್, ಮಹಾದೇವ ಬೆಳಮಗಿ, ರಾಮು ರೆಡ್ಡಿ, ವಿಶ್ವನಾಥ್ ಸಾಲಿಮಠ, ಶ್ರೀಶೈಲ ಮೂಲಗೆ, ಭಾರ್ಗವಿ, ಡಾ. ಸುಧಾ ಹಾಲಕಾಯ, ಸಂಗೀತಾ, ರಕ್ಷಿತಾ ಪಾಟೀಲ್, ಭಾರತಿ ಗುಡ್ದಾ, ಮಲ್ಲಿನಾಥ ಆವರಾದಿ, ನಿತೀಶ್ ಕುಮಾರ್, ಸೇರಿದಂತೆ ಹಲವು ಪ್ರಮುಖ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!