spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲಸಿಕಾ ಅಭಿಯಾನ: ಭಾರತ ವಿಶ್ವದಲ್ಲಿಯೇ ನಂಬರ್ ಒನ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತದಲ್ಲಿ ಲಸಿಕಾ ಅಭಿಯಾನ ವೇಗಗತಿಯಲ್ಲಿ ಸಾಗುತ್ತಿದ್ದು, ಕೋವಿಡ್ ವ್ಯಾಕ್ಸಿನ್ ಒಂದು ಡೋಸ್ ಮತ್ತು ಎರಡೂ ಡೋಸ್ ಪೂರ್ಣಗೊಳಿಸಿದವರಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈವರೆಗೆ ಶೇ. 36.30ರಷ್ಟು ಕೋವಿಡ್ ಲಸಿಕೆಯನ್ನು ಲಸಿಕೆಯನ್ನು ನಗರ ಪ್ರದೇಶಗಳಲ್ಲಿ ಮತ್ತು ಶೇ 62.54 ರಷ್ಟು ಲಸಿಕೆಯನ್ನು ಗ್ರಾಮೀಣ ಪ್ರದೇಶದಲ್ಲಿ ನೀಡಲಾಗಿದೆ ಎಂದು  ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಿರುವ ಕೋವಿಡ್ ಲಸಿಕೆ ಇ- ಬುಕ್ ನಲ್ಲಿ ಹೇಳಿದೆ.

ಈವರೆಗೆ ನೀಡಲಾದ ಒಟ್ಟು ಕೋವಿಡ್-19 ಲಸಿಕೆ ಪ್ರಮಾಣದಲ್ಲಿ ಅಮೆರಿಕವನ್ನು ಭಾರತ ಹಿಂದಿಕ್ಕಿದೆ. ಭಾರತದಲ್ಲಿ ಒಟ್ಟು 181 ಮಿಲಿಯನ್ ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅಮೆರಿಕದಲ್ಲಿ 178 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇಲ್ಲಿಯ ತನಕ ಪುರುಷರಿಗೆ ಶೇ. 52.5, ಮಹಿಳೆಯರಿಗೆ ಶೇ 47.5ರಷ್ಟು ಲಸಿಕೆ ನೀಡಲಾಗಿದೆ.ವಯಸ್ಕರಲ್ಲಿ ಶೇ 60.7ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss