ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಮಾಲ್ಡೀವ್ಸ್ನಲ್ಲಿ ಭಾರತವು ಅತಿದೊಡ್ಡ ಮೂಲಸೌಕರ್ಯ ಯೋಜನೆಗೆ ಇಂದು ಸಹಿ ಹಾಕಲಿದೆ.
ಮಹಾರಾಷ್ಟ್ರ ಮೂಲದ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿ ಗ್ರೇಟರ್ ಮೇಲ್ ಕನೆಕ್ಟಿವಿಟಿ ಪ್ರಾಜೆಕ್ಟ್ನ್ನು ಅಭಿವೃದ್ಧಿಪಡಿಸಲಿದ್ದು, ಮಾಲ್ಡೀವ್ಸ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ.
ಸಹಿ ಸಮಾರಂಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶೃಂಗ್ಲಾ, ಭಾರತೀಯ ರಾಯಭಾರಿ ಸಂಜಯ್ ಸುಧೀರ್ ಹಾಗೂ ಮಾಲ್ಡೀವ್ಸ್ನ ನಾಲ್ವರು ಮಂತ್ರಿಗಳು ಭಾಗವಹಿಸಲಿದ್ದಾರೆ.
ಯೋಜನೆಯನ್ನು ಮಾಲ್ಡೀವ್ಸ್ನ ಆರ್ಥಿಕ ಜೀವನಾಡಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಮಾಲ್ಡೀವ್ಸ್ ಜನಸಂಖ್ಯೆಯ ಅರ್ಧದಷ್ಟು ಭಾಗವನ್ನು ಹೊಂದಿರುವ ನಾಲ್ಕು ದ್ವೀಪಗಳ ನಡುವೆ ಸಂಪರ್ಕಕ್ಕೆ ಇದು ಉತ್ತೇಜನ ನೀಡಲಿದೆ.
ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರ ಕೋರಿಕೆ ಮೇರೆಗೆ ಇದನ್ನು ನಿರ್ಮಿಸಲಾಗಿದೆ. ಈ ಸೇತುವೆ 6.74 ಉದ್ದದ್ದಾಗಿದ್ದು, ಈ ಸೇತುವೆ ವಿಲ್ಲಿಂಗ್ಲಿ, ಗುಲ್ಹಿಫಲ್ಹು,ಥಿಲಾಫುಶಿ ದ್ವೀಪಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಗೆ 100 ಮಿಲಿಯನ್ ಗ್ರಾಂಡ್ ಇಂಡಿಯಾ ಗ್ರಾಂಟ್ ಮಾಡುತ್ತಿದೆ. ಹಾಗೂ 400 ಮಿಲಿಯನ್ ಡಾಲರ್ ಸಾಲದಲ್ಲಿ ಅನುದಾನ ನೀಡಲಾಗಿದೆ.