Sunday, April 18, 2021

Latest Posts

ಕೊರೋನಾ ವಿರುದ್ಧ ಹೋರಾಡಲು ವಿಶ್ವಕ್ಕೆ ಭಾರತದ ಬಲ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತವು ವಿಶ್ವದ 150 ರಾಷ್ಟ್ರಗಳಿಕೆ ಕೊರೋನಾ ಲಸಿಕೆ ಹಾಗೂ ವೈದ್ಯಕೀಯ ನೆರವು ನೀಡಿದ್ದು, 50 ರಾಷ್ಟ್ರಗಳಿಗೆ ಮೇಡ್ ಇನ್ ಇಂಡಿಯಾ ಕೊರೋನಾ ಲಸಿಕೆ ಪೂರೈಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಇಂದು ಸ್ವೀಡಿಷ್ ಪ್ರಧಾನಿ ಸ್ಟೀಫನ್ ಲೋಫ್ವೆನ್ ಜೊತೆ ನಡೆದ ಆನ್ ಲೈನ್ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪ್ಯಾರಿಸ್ ಒಪ್ಪಂದದಡಿಯಲ್ಲಿ ಭಾರತ ತನ್ನ ಬದ್ಧತೆಯ ಮೇಲೆ ಮುಂದುವರಿಯಲಿದೆ ಎಂದು ಹೇಳಿದರು.
ಕೊರೋನಾ ಸಾಂಕ್ರಾಮಿಕ ವೇಳೆಯಲ್ಲಿ ಭಾರತ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಸಹಕರಿಸೋದು ಮುಖ್ಯ ಎಂದು ಅರಿತುಕೊಂಡಿತು ಎಂದರು.

ಈ ಹಿನ್ನೆಲೆ ಭಾರತ ಕೊರೋನಾ ವಿರುದ್ಧ ಹೋರಾಡಲು ವಿಶ್ವದ 50 ರಾಷ್ಟ್ರಗಳಿಗೆ ಸ್ವದೇಶಿ ಲಸಿಕೆ ಪೂರೈಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಲಸಿಕೆಯನ್ನು ಒದಗಿಸುತ್ತೇವೆ ಎಂದು ತಿಳಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss