Saturday, August 13, 2022

Latest Posts

ಭಾರತ-ನ್ಯೂಜಿಲ್ಯಾಂಡ್ ಏಕದಿನ​ ಕ್ರಿಕೆಟ್ ಸರಣಿ ಮುಂದೂಡಿಕೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಟೀಂ ಇಂಡಿಯಾ – ನ್ಯೂಜಿಲ್ಯಾಂಡ್​ ನಡುವಿನ ಏಕದಿನ ಸರಣಿ 2022ರವರೆಗೆ ಮುಂದೂಡಿಕೆಯಾಗಿದೆ.
ನ್ಯೂಜಿಲ್ಯಾಂಡ್​ನಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿತ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ನ್ಯೂಜಿಲ್ಯಾಂಡ್​ ಕ್ರಿಕೆಟ್​ ಮಂಡಳಿ ವಕ್ತಾರರು ಮಾಹಿತಿ ಖಚಿತಪಡಿಸಿದ್ದಾರೆ. ಮೇಲಿಂದ ಮೇಲೆ ಐಸಿಸಿ ಆಯೋಜಿತ ಟೂರ್ನಿಗಳಿರುವ ಕಾರಣ ಹಾಗೂ ಕೋವಿಡ್​​ನಿಂದಾಗಿ ಸರಣಿ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದುಬೈನಲ್ಲಿ ಆಯೋಜನೆಗೊಂಡಿರುವ ಟಿ-20 ವಿಶ್ವಕಪ್​ ಮುಕ್ತಾಯವಾಗುತ್ತಿದ್ದಂತೆ ಟೀಂ ಇಂಡಿಯಾ ನವೆಂಬರ್ ತಿಂಗಳಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ ಇದೀಗ ಮುಂದೂಡಿಕೆಯಾಗಿದೆ. ವಿಶೇಷವೆಂದರೆ ಟೂರ್ನಿ ಮುಂದೂಡಿಕೆಯಾಗಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ಹಂಚಿಕೊಂಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss