ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಅಂತಿಮ ಎರಡನೇ ಟೆಸ್ಟ್ ಪಂದ್ಯ ಇಂದು ನಡೆಯಲಿದೆ.
ಪಂದ್ಯ ಇನ್ನೇನು ಶುರುವಾಗುವುದರಲ್ಲಿದ್ದು, ಮಳೆಯ ಕಾರಣದಿಂದ ಟಾಸ್ ವಿಳಂಬವಾಗಿದೆ.
ಕಿವೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಭಾರತ ಗೆಲುವಿನ ಸಮೀಪ ಬಂದಿದ್ದರೂ, ಪಿಚ್ ಹೆಚ್ಚಿನ ನೆರವು ನೀಡದೇ ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲಕಾರಿಯಾಗಿದ್ದು, ಟೀಂ ಇಂಡಿಯಾ ಗೆಲುವಿನ ಭರವಸೆ ನೀಡಿದೆ. ನ್ಯೂಜಿಲೆಂಡ್ ತಂಡ ಕೂಡ ಭಾರತದಲ್ಲಿ ಒಂದೂ ಟೆಸ್ಟ್ ಸರಣಿ ಗೆದ್ದಿಲ್ಲ, ಹಾಗಾಗಿ ಈ ಐತಿಹಾಸಿಕ ಗೆಲುವಿಗೆ ತಂಡ ಎದುರುನೋಡುತ್ತಿದೆ.
ಮೊದಲ ಬಾರಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಕ್ಯಾಪ್ಟನ್ ಕೋಹ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಇವರ ಪ್ರದರ್ಶನ ಯಾವ ರೀತಿ ಇರಲಿದೆ ಎಂದು ಕಾದು ನೋಡಬೇಕಿದೆ.
- Advertisement -