ಇಂಡಿಯಾ-ಪಾಕಿಸ್ತಾನ ಟಿ-20 ಮ್ಯಾಚ್: ಒಂದೇ ಗಂಟೆಯಲ್ಲಿ ಟಿಕೆಟ್ ಸೋಲ್ಡ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಲೀಗ್‌ನ ಭಾರತ- ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಒಂದೇ ಗಂಟೆಯಲ್ಲಿ ಮಾರಾಟಗೊಂಡಿವೆ.

ಸಾಂಪ್ರದಾಯಿಕ ಎದುರಾಳಿಗಳ ಹೈ ವೋಲ್ಟೇಜ್ ಪಂದ್ಯ ನೋಡೋದಕ್ಕೆ ಅಭಿಮಾನಿಗಳು ಕಾತರರಾಗಿದ್ದು, ಪಂದ್ಯಕ್ಕೆ ಟಿಕೆಟ್ ಬಿಡುಗಡೆಯಾದ ಗಂಟೆಯಲ್ಲೇ ಎಲ್ಲ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿಬಿಟ್ಟಿವೆ.

ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ಭಾರತ-ಪಾಕಿಸ್ತಾನ ನಡುವೆ ಅ.23ರಂದು ಪಂದ್ಯ ನಡೆಯಲಿದೆ. ವಿಶ್ವದ ದೊಡ್ಡ ಮೈದಾನಗಳಲ್ಲಿ ಇದೂ ಒಂದಾಗಿದ್ದು, ಲಕ್ಷ ಮಂದಿ ಕುಳಿತು ಪಂದ್ಯ ನೋಡಬಹುದಾಗಿದೆ. 60 ಸಾವಿರ ಟಿಕೆಟ್‌ಗಳೂ ಒಂದೇ ಗಂಟೆಯಲ್ಲಿ ಮಾರಾಟ ಆಗಿದ್ದು, ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!