spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಫ್ರಿಕಾ ದೇಶಗಳಿಗೆ ಭಾರತದ ನೆರವು: ಇದು ದಯಾಮಯಿ ರಾಷ್ಟ್ರ ಎಂದ ಮಾಜಿ ಕ್ರಿಕೆಟಿಗ ಕೆವಿನ್​​ ಪೀಟರ್ಸನ್​

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಕೋವಿಡ್‌-19 ಹೊಸ ತಳಿ ಓಮಿಕ್ರಾನ್‌ ಬಗ್ಗೆ ಜಾಗತಿಕವಾಗಿ ಆತಂಕ ಶುರುವಾಗಿದ್ದು, ಈ ಬೆನ್ನಲ್ಲೇ ಕೇಂದ್ರ ಸರ್ಕಾರ ನಿನ್ನೆ ಮಹತ್ವದ ಘೋಷಣೆಯೊಂದನ್ನು ಮಾಡದೆ. “ಆಫ್ರಿಕಾ ದೇಶಗಳಿಗೆ ಕೋವಿಡ್‌ ಲಸಿಕೆ ಪೂರೈಕೆ ಸೇರಿದಂತೆ ಅಗತ್ಯ ನೆರವು ನೀಡಲು ನಾವು ಸಿದ್ಧರಿದ್ದೇವೆ” ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತದ ಈ ಘೊಷಣೆಗೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟರ್​ ಕೆವಿನ್​ ಪೀಟರ್ಸನ್​ ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.

ಎಎನ್​ಐ ಸುದ್ದಿ ಮಾಧ್ಯಮದ ಟ್ವೀಟ್​​ನ್ನು ರೀಟ್ವೀಟ್​ ಮಾಡಿರುವ ಪೀಟರ್ಸನ್​, ” ಭಾರತ ದೇಶವು ಮತ್ತೊಮ್ಮೆ ತನ್ನ ಕಾಳಜಿಯ ಮನೋಭಾವವನ್ನು ಪ್ರದರ್ಶಿಸಿದೆ. ಅನೇಕ ದಯಾಮಯ ಹೃದಯದ ಜನರುನ್ನು ಹೊಂದಿರುವ ಅದ್ಭುತ ದೇಶ ಅದು. ಧನ್ಯವಾದಗಳು” ಎಂದು ಬರೆದು, ಪ್ರಧಾನಿ ಮೋದಿಯವರನ್ನೂ ಟ್ಯಾಗ್​ ಮಾಡಿದ್ದಾರೆ.

ಪೀಟರ್ಸನ್​​ ಮತ್ತು ಭಾರತದ ಸಂಬಂಧ ಇಂದು ನಿನ್ನೆಯದಲ್ಲ. ಬಹಳ ಹಳೆಯದು. ಅವರು ಕ್ರಿಕೆಟ್​ ಟೀಂನಲ್ಲಿದ್ದಾಗ ಆಗಾಗ ಭಾರತಕ್ಕೆ ಬಂದು ಹೋಗುತ್ತಿದ್ದರು. ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲೂ ಕೂಡ ಅವರು ಕೆಲವು ವರ್ಷಗಳ ಕಾಲ ಆಟವಾಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss