Thursday, August 11, 2022

Latest Posts

ಜಗತ್ತಿಗೆ ಅಕ್ಕಿ ತಿನ್ನಿಸುವಲ್ಲಿ ಸಿಂಹಪಾಲು ಪಡೆಯುತ್ತಿದೆ ಭಾರತ

ಹೊಸದಿಗಂತ ಆನ್ ಲೈನ್ ಡೆಸ್ಕ್:
ಈ ವರ್ಷ ಅಕ್ಕಿಯ ಜಾಗತಿಕ ರಫ್ತಿನಲ್ಲಿ ಶೇ. 45ರಷ್ಟು ದೊಡ್ಡ ಪಾಲನ್ನು ಹೊಂದುವತ್ತ ಭಾರತ ಮುನ್ನುಗಿದೆ. ಚೀನಾದ ಬಳಿಕ ವಿಶ್ವ 2ನೇ ದೊಡ್ಡ ಅಕ್ಕಿ ಬೆಳೆಯುವ ದೇಶವಾಗಿದೆ ಭಾರತ.
ಜಾಗತಿಕ ಅಕ್ಕಿ ರಫ್ತಿನಲ್ಲಿ ಭಾರತ ಸರಿಸುಮಾರು ಅರ್ಧದಷ್ಟು ಭಾಗವನ್ನು ಹೊಂದುವುದು ಸಾಧ್ಯವಾಗಿದ್ದಾದರೂ ಹೇಗೆ? ಇದಕ್ಕೆ ಉತ್ತರ ಬಂದರುಗಳ ನಿರ್ವಹಣಾ ಸಾಮರ್ಥ್ಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿರುವುದು. ಹೀಗಾಗಿ ಭಾರತ ಆಫ್ರಿಕಾ ಮತ್ತು ಏಷ್ಯಗಳಲ್ಲಿ ದಾಖಲೆ ಖರೀದಿದಾರರನ್ನು ತಲುಪುವುದು ಸಾಧ್ಯವಾಗಿದೆ.
ವಾರ್ಷಿಕ 22 ದಶಲಕ್ಷ ಟನ್ ಗಳಷ್ಟು ಅಕ್ಕಿ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದೆ ಭಾರತ. ಥೈಲ್ಯಾಂಡ್, ವಿಯೆಟ್ನಾಂ, ಪಾಕಿಸ್ತಾನ ಈ ಮೂರು ರಾಷ್ಟ್ರಗಳ ಒಟ್ಟು ರಪ್ತಿಗಿಂತ ಹೆಚ್ಚಿನ ಪ್ರಮಾಣದ ಅಕ್ಕಿ ರಫ್ತು ಭಾರತದಿಂದ ನಡೆಯಲಿದೆ ಎಂದು ಓಲಂ ಇಂಡಿಯಾ ರೈಸ್ ಸಂಸ್ಥೆಯ ಉಪಾಧ್ಯಕ್ಷ ನಿತಿನ್ ಗುಪ್ತಾ ಹೇಳಿರುವುದನ್ನು ರಾಯಿಟರ್ಸ್ ವರದಿ ಮಾಡಿದೆ.
ಈ ವರ್ಷ ಚೀನಾ, ವಿಯೆಟ್ನಾಂ ಹಾಗೂ ಬಾಂಗ್ಲಾದೇಶ ಕೂಡ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿದೆ.
2020ರಲ್ಲಿ ಭಾರತದ ಅಕ್ಕಿ ರಫ್ತು ಅದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.49ರಷ್ಟು ಏರಿಕೆಯಾಗಿ 14.7 ಮಿಲಿಯನ್ ಟನ್ ತಲುಪಿತು. ಬಾಸುಮತಿ ಹೊರತಾದ ಅಕ್ಕಿಯ ರಫ್ತು ಶೇ.77ರಷ್ಟು ಹೆಚ್ಚಾಗಿ 9.7 ಮಿಲಿಯನ್ ಟನ್ ತಲುಪಿತ್ತು.
2021ರಲ್ಲಿ ಈ ಪ್ರಮಾಣ ದುಪ್ಪಟ್ಟಾಗಿದ್ದು ಬಾಸುಮತಿ ಹೊರತಾದ ಅಕ್ಕಿ 18 ಮಿಲಿಯನ್ ಟನ್ ಹಾಗೂ ಬಾಸುಮತಿ ಅಕ್ಕಿ 4 ಮಿಲಿಯನ್ ಟನ್ ರಫ್ತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss