Monday, August 8, 2022

Latest Posts

ಭಾರತ- ಶ್ರೀಲಂಕಾ ಸರಣಿಯ ದಿನಾಂಕ ಬದಲಾವಣೆ ಬಳಿಕ ಸಮಯದಲ್ಲೂ ಬದಲಾವಣೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸರಣಿಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ, ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಉಭಯ ತಂಡಗಳ ನಡುವೆ ನಡೆಯಲಿರುವ ಟಿ 20 ಅಂತಾರಾಷ್ಟ್ರೀಯ ಮತ್ತು ಏಕದಿನ ಪಂದ್ಯಗಳು (ಒಡಿಐ) ನಡೆಯುವ ಬದಲಿ ಸಮಯವನ್ನು ಹಂಚಿಕೊಂಡಿದೆ.
ಶ್ರೀಲಂಕಾ ಕ್ರಿಕೆಟ್ ತಂಡದ ಶಿಬಿರದಲ್ಲಿ ಕೋವಿಡ್-19 ಸೋಂಕು ಏಕಾಏಕಿ ಕಂಡುಬಂದ ನಂತರ ಭಾರತ ಮತ್ತು ಆತಿಥೇಯ ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಮುಂದೂಡಲಾಗಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇತ್ತೀಚೆಗೆ ದೃಢಪಡಿಸಿತ್ತು.ಸೋಮವಾರ, ಶ್ರೀಲಂಕಾ ಕ್ರಿಕೆಟ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ನಲ್ಲಿ, ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಮತ್ತು ಆತಿಥೇಯ ಶ್ರೀಲಂಕಾ ನಡುವೆ ನಡೆಯಲಿರುವ ಪಂದ್ಯಗಳ ಸಮಯದ ಬದಲಾವಣೆಯನ್ನು ಬಹಿರಂಗಪಡಿಸಿದೆ. ಪೋಸ್ಟ್ ಪ್ರಕಾರ, ದ್ವಿಪಕ್ಷೀಯ ಸರಣಿಯ ಏಕದಿನ ಪಂದ್ಯಗಳು ಮಧ್ಯಾಹ್ನ 2: 30 ಕ್ಕೆ ಬದಲಾಗಿ ಮಧ್ಯಾಹ್ನ 3:00 ಗಂಟೆಗೆ ಪ್ರಾರಂಭವಾಗುತ್ತವೆ. ಟಿ 20 ಐ ಪಂದ್ಯಗಳು ರಾತ್ರಿ 8:00 ಗಂಟೆಗೆ ಆರಂಭವಾಗಲಿವೆ.
ಈ ಮೊದಲು ಉಭಯ ರಾಷ್ಟ್ರಗಳ ನಡುವಿನ ಟಿ 20 ಪಂದ್ಯಗಳು ಸಂಜೆ 7:00 ಗಂಟೆಗೆ ನಡೆಯಬೇಕಿತ್ತು. ಆದರೆ ಸೋಂಕು ಪತ್ತೆಯಾದ ನಂತರ ಉಭಯ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯನ್ನು ಮುಂದೂಡಿದ ನಂತರ ಏಕದಿನ ಮತ್ತು ಟಿ 20 ಐ ಸರಣಿಯ ಬಗ್ಗೆ ಇತ್ತೀಚಿನ ಬೆಳವಣಿಗೆಗಳು ಈಗ ಹೊರ ಬಂದಿವೆ. ರಾಹುಲ್ ದ್ರಾವಿಡ್ ತರಬೇತುದಾರರಾಗಿ, ಧವನ್ ನೇತೃತ್ವದ ಎರಡನೇ ದರ್ಜೆ ತಂಡವು ಜುಲೈ 18 ರಿಂದ ಮೂರು ಟಿ 20 ಐ ಮತ್ತು ಆತಿಥೇಯ ಶ್ರೀಲಂಕಾದೊಂದಿಗೆ ಏಕದಿನ ಪಂದ್ಯಗಳನ್ನು ಆಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss