spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಯಾರಾಗುತ್ತಿದೆ ಸಮುದ್ರದಾಳ ತಡಕಾಡುವ ದೇಸಿ ಮುಳುಗುವಾಹನ

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

……………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

(ಚಿತ್ರ- ಅಮೆರಿಕ ಮುಳುಗುವಾಹನ)

ಇನ್ನೈದು ವರ್ಷಗಳಲ್ಲಿ ಭಾರತವು 6,000 ಮೀಟರುಗಳಷ್ಟು ಸಮುದ್ರದಾಳಕ್ಕೆ ಹೋಗಿ ಸಂಶೋಧನೆಗೆ ನೆರವಾಗಬಲ್ಲ ಮುಳುಗುವಾಹನವನ್ನು ಅಭಿವೃದ್ಧಿಪಡಿಸಲಿದೆ. ಮೂರು ವಿಜ್ಞಾನಿಗಳನ್ನು ಸಾಗರದಾಳಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯದ ಇಂಥ ವಾಹನದ ಅಭಿವೃದ್ಧಿಗೆ ಸಾವಿರಾರು ಕೋಟಿ ರುಪಾಯಿಗಳ ಬಜೆಟ್ ಅನ್ನೇ ರೂಪಿಸಿಕೊಳ್ಳಲಾಗಿದೆ.

ಭೂ ವಿಜ್ಞಾನ ಖಾತೆಯ ಸಚಿವ ಜಿತೇಂದ್ರ ಸಿಂಗ್ ಅವರು ಸಚಿವಾಲಯದ ಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾಡಿದ ಭಾಷಣದಲ್ಲಿ ಈ ಆಸಕ್ತಿಕರ ಅಂಶವನ್ನು ಹೇಳಿದ್ದಾರೆ.

ಕಳೆದ ಜೂನ್ ನಲ್ಲಿ ರು 4,000 ಕೋಟಿ ರುಪಾಯಿಗಳ ಆಯವ್ಯಯವನ್ನಿಟ್ಟುಕೊಂಡು ಡೀಪ್ ಸೀ ಮಿಷನ್ ರೂಪಿಸುವುದಕ್ಕೆ ಸಂಪುಟವು ಅನುಮೋದನೆ ನೀಡಿತ್ತು. ಅಂಥ ಡೀಪ್ ಸೀ ಮಿಷನ್ ನ ಮುಖ್ಯ ಭಾಗವೇ ಇಂಥದೊಂದು ಮುಳುಗುವಾಹನ.

ಇದು ಸವಾಲಿನ ಕೆಲಸ

ಮನುಷ್ಯರು ರಕ್ಷಣಾಗವಸು, ಆಮ್ಲಜನಕ ಸಿಲಿಂಡರ್ ಉಪಯೋಗಿಸಿಕೊಂಡು ಸಮುದ್ರತಳವನ್ನು ತಡಕಾಡುವುದು ಒಂದು ವಿಧಾನ. ಆದರೆ ವಾಹನವೊಂದರಲ್ಲಿ ಹೋಗುವುದೆಂದಾಗ ಅಲ್ಲಿನ ಸವಾಲುಗಳೇ ಭಿನ್ನ, ಅಲ್ಲಿ ಒತ್ತಡ ಕೆಲಸ ಮಾಡುವ ರೀತಿಯೇ ಭಿನ್ನ. 

ಇವತ್ತಿಗೆ ಅಮೆರಿಕ, ಚೀನಾ, ಜಪಾನ್, ರಷ್ಯಾ, ಫ್ರಾನ್ಸ್ ಬಳಿ ಮಾತ್ರ ಈ ತಂತ್ರಜ್ಞಾನವಿದೆ. ಭಾರತ ಸಫಲವಾದಲ್ಲಿ, ಇಂಥ ಮುಳುಗುವಾಹನವನ್ನು ಆರನೇ ದೇಶವಾಗಲಿದೆ. 

2019ರಲ್ಲಿ ಅಮೆರಿಕದ ಅನ್ವೇಷಕರು ಮುಳುಗುವಾಹನ ಬಳಸಿ 10,927 ಮೀಟರ್ ಸಾಗರದಾಳಕ್ಕೆ ಹೋಗಿದ್ದರು. ನಂತರ ಚೀನಾದ ವಾಹನ 10,909 ಮೀಟರ್ ಆಳದವರೆಗೆ ಹೋಗಿತ್ತು. 

ಗಗನಯಾನದ ಜತೆಯಲ್ಲೇ ಸಮುದ್ರಯಾನದ್ದೂ ಕೆಲಸ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ಈಗ ಭಾರತದಲ್ಲಿ ಇಂಥ ಮುಳುಗುವಾಹನದ ಮಾದರಿಯ ಅಭಿವೃದ್ಧಿಯಲ್ಲಿ ತೊಡಗಿದೆ. ಈ ಸಂಸ್ಥೆ ಇಸ್ರೋ ಜತೆಗೂಡಿ 2024ರ ಒಳಗೆ ಈ ಕಾರ್ಯವನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿದೆ. ಇನ್ನೊಂದೆಡೆ ಇಸ್ರೊ ಗಗನಯಾನಕ್ಕೆ ಸಹ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಬಾಹ್ಯಾಕಾಶ ಮತ್ತು ಸಮುದ್ರದಾಳಗಳಿಗೆರಡೂ ಮನುಷ್ಯರು ಪ್ರಯಾಣಿಸುವ ಸಾಧನೆ ಒಟ್ಟೊಟ್ಟಿಗೇ ಸಾಕಾರಗೊಳ್ಳುವ ನಿರೀಕ್ಷೆ ಇದೆ. 

ಖಾಲಿ ಪ್ರತಿಷ್ಠೆಗಲ್ಲ

ಈ ಮುಳುಗುವಾಹನವಾಗಲೀ, ಡೀಪ್ ಸೀ ಮಿಷನ್ ಆಗಲೀ ಕೇವಲ ಪ್ರತಿಷ್ಠೆಯ ಸಂಗತಿಗಳಲ್ಲ. ಸಾಗರದಾಳದ ಸಂಪತ್ತುಗಳ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಹಾಗೂ ಭವಿಷ್ಯದಲ್ಲಿ ಅವನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳುವುದಕ್ಕೆ ಈ ಸಂಶೋಧನೆ ಮತ್ತು ಅನ್ವೇಷಣೆಗಳು ಸಹಾಯವಾಗಲಿವೆ. 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss