Monday, August 8, 2022

Latest Posts

ಡಿ ಆರ್ ಡಿ ಒದ ‘ಅಭ್ಯಾಸ್’ ಪರೀಕ್ಷೆ ಯಶಸ್ವಿ: ಏನೀ ದೇಶೀಯ ಸಾಹಸ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಹೈ-ಸ್ಪೀಡ್ ಎಕ್ಸ್‌ಪೆಂಡೆಬಲ್ ಏರಿಯಲ್ ಟಾರ್ಗೆಟ್ (ಅತಿವೇಗದ ಆಗಸ ಗುರಿ ವಾಹನ. ಇದು ಕ್ಷಿಪಣಿಗಳ ಕಾರ್ಯಕ್ಷಮತೆ ಪರೀಕ್ಷಿಸುವುದಕ್ಕೆ ಬಳಸುವಂಥದ್ದು. ಆಗಸದಲ್ಲಿ ಅತಿವೇಗವಾಗಿ ಚಲಿಸುತ್ತಿರುವ ಆ ಡ್ರೋನ್ ಮಾದರಿಯನ್ನು ಕ್ಷಿಪಣಿಗಳು ಬೇಧಿಸಬಲ್ಲವೇ ಎಂಬ ಪರೀಕ್ಷೆಗೆ ಇದು ಅನುಕೂಲಕರ) ‘ಅಭ್ಯಾಸ್’ ದ ಹಾರಾಟ ಪರೀಕ್ಷೆಯನ್ನು ಡಿಆರ್ ಡಿಒ ಯಶಸ್ವಿಯಾಗಿ ಪೂರೈಸಿದೆ.

ಒಡಿಶಾದ ಬಂಗಾಳಕೊಲ್ಲಿಯ ಕರಾವಳಿ ತೀರದ ಚಂಡಿಪುರದಲ್ಲಿ ಈ ಪರೀಕ್ಷೆ ನಡೆಸಲಾಗಿದೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಕ್ಷಿಪಣಿ ವ್ಯವಸ್ಥೆಗಳ ಮೌಲ್ಯಮಾಪನಕ್ಕಾಗಿ ಈ ವಾಹನವನ್ನು ವೈಮಾನಿಕ ಗುರಿಯಾಗಿ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.

ಏರ್‌ಕ್ರಾಫ್ಟ್‌ನ ಕಾರ್ಯಕ್ಷಮತೆಯನ್ನು ಟೆಲಿಮೆಟ್ರಿ ಮತ್ತು ರಾಡಾರ್‌ಗಳು ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (ಇಒಟಿಎಸ್) ಸೇರಿದಂತೆ ವಿವಿಧ ಟ್ರ್ಯಾಕಿಂಗ್ ಸಂವೇದಕಗಳ ಮೂಲಕ ಮೇಲ್ವಿಚಾರಣೆ ಮಾಡಲಾಗಿದೆ.

‘ಅಭ್ಯಾಸ್’ ಫ್ಲೈಟ್ ಯಶಸ್ವಿ ಪ್ರಯೋಗಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ಸಂಸ್ಥೆಯನ್ನು ಅಭಿನಂದಿಸಿದ್ದಾರೆ. ಈ ಸ್ವದೇಶಿ ತಂತ್ರಜ್ಞಾನದ ವಿಮಾನವನ್ನು ಅಭಿವೃದ್ಧಿಪಡಿಸಿದ ನಂತರ, ಭಾರತೀಯ ಸಶಸ್ತ್ರ ಪಡೆಗಳಿಗೆ ಹೈ-ಸ್ಪೀಡ್ ಎಕ್ಸ್‌ಪೆಂಡಬಲ್ ಏರಿಯಲ್ ಟಾರ್ಗೆಟ್‌ಗಳ ಅವಶ್ಯಕತೆಗಳನ್ನು ಪೂರೈಸಲಿದೆ ಎಂದರು.
ಈ ಪರೀಕ್ಷೆಯ ಉದ್ದೇಶವೇ ಇಂಥ ವೈಮಾನಿಕ ಗುರಿ ವಾಹನಗಳ ಅಭಿವೃದ್ಧಿಯಾಗಿದ್ದು, ಈಗಾಗಲೇ ಭಾರತೀಯ ಕಂಪನಿಗಳಿಂದ ಈ ಏರ್‌ಕ್ರಾಫ್ಟ್ ತಯಾರಿಕೆಗೆ ಬಿಡ್ಡಿಂಗ್‌ ಕರೆಯಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss