ಬಂಗಾಳಕೊಲಿಯಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ, ವಾಯುಪಡೆಗೆ ಮತ್ತಷ್ಟು ಬಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೂರದ ಗುರಿಗಳನ್ನು ಮುಟ್ಟುವ ಸಾಮರ್ಥ್ಯವಿರುವ ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ. ಬಂಗಾಳಕೊಲ್ಲಿಯಲ್ಲಿ ಸುಖೋಯ್ ಫೈಟರ್ ಜೆಟ್‌ನಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು‌ ಗುರುವಾರ ಭಾರತೀಯ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಹಿಂದೆ ಉಡಾವಣೆಗೊಂಡ ಬ್ರಹ್ಮೋಸ್‌ಗೆ ಹೋಲಿಸಿದರೆ, ಇದು ಇನ್ನಷ್ಟು ದೂರದ ಗುರಿಗಳನ್ನು ಹೊಡೆಯಬಲ್ಲವು. ಈ ಹಿಂದಿನ ಕ್ಷಿಪಣಿಯು 290 ಕಿ.ಮೀ ವ್ಯಾಪ್ತಿಯ ಗುರಿ ಹೊಂದಿದ್ದು, ಈ ಕ್ಷಿಪಣಿಗಳು 350 ಕಿ.ಮೀ. ಗುರಿಯನ್ನು ಕ್ರಮಿಸಲ್ಲಬವು ಎಂದಿದ್ದಾರೆ.

ಸುಖೋಯ್-30MK I ಯುದ್ಧ ವಿಮಾನದಿಂದ ಉಡಾವಣೆಯು ಯೋಜಿಸಿದಂತೆ ನಡೆದಿದೆ.  ಮತ್ತು ಕ್ಷಿಪಣಿ ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಪ್ರಯೋಗದ ಯಶಸ್ಸು ಭಾರತೀಯ ವಾಯುಪಡೆಗೆ ಹೊಸ ಬಲ ನೀಡಿದಂತಿದೆ. ಭಾರತೀಯ ವಾಯುಪಡೆ, DRDVO, HAL ಮತ್ತು ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕ್ಷಿಪಣಿಯ ಅಭಿವೃದ್ಧಿ ಮತ್ತು ಉಡಾವಣೆಯಲ್ಲಿ ತೊಡಗಿಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!