ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭಾರತ ವಿಜಯ: ದ್ರಾವಿಡ್‌ಗೆ ಶ್ಲಾಘನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………….. 

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಭಾರತವು ಶ್ರೀಲಂಕಾವನ್ನು ಎರಡನೇ ಏಕದಿನ ಪಂದ್ಯದಲ್ಲೂ ರೋಮಾಂಚಕಾರಿಯಾಗಿ ಸೋಲಿಸಿದ ನಂತರ ಇದೀಗ ಕೋಚ್ ರಾಹುಲ್ ದ್ರಾವಿಡ್ ಕುರಿತಂತೆ ಶ್ಲಾಘನೆಗಳ ಮಹಾಪೂರ ಹರಿಯುತ್ತಿದೆ. ಗೆಲುವಿಗೆ 276 ರನ್‌ಗಳ ಗುರಿ ಪಡೆದ ಭಾರತವು ಒಂದು ಹಂತದಲ್ಲಿ  193 ರನ್‌ಗಳಿಗೆ 7 ವಿಕೆಟ್ ಕಳಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಭುವನೇಶ್ವರ ಕುಮಾರ್ ಮತ್ತು ದೀಪಕ್ ಚಾಹರ್ ಮುರಿಯದ ಜತೆಯಾಟದಲ್ಲಿ ಅಮೋಘ ಜಯ ದೊರಕಿಸಿಕೊಟ್ಟಿದ್ದರು.
ಬಿ ತಂಡ ಎಂದು ಕೆಲವರಿಂದ ಟೀಕಿಸಲ್ಪಟ್ಟಿದ್ದ ಭಾರತವು ಈ ಅಮೋಘ ಜಯ ಸಾಧಿಸುವಲ್ಲಿ ದ್ರಾವಿಡ್‌ರ ಪಾತ್ರ ದೊಡ್ಡದೆಂದು ಈಗ ಹೊಗಳಲಾಗುತ್ತಿದೆ. ಗೆಲುವಿನ ಬಳಿಕ ದ್ರಾವಿಡ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾಡಿದ ಉತ್ಸಾಹಪೂರ್ಣ ಭಾಷಣ ಕೂಡ ಎಲ್ಲರಿಂದ ಶ್ಲಾಘಿಸಲ್ಪಡುತ್ತಿದೆ. ಬಿಸಿಸಿಐ ಅದರ ವಿಡಿಯೋ ಹಂಚಿಕೊಂಡಿದೆ. ಪಂದ್ಯದ ಮಧ್ಯದಲ್ಲಿ ದ್ರಾವಿಡ್ ಡ್ರೆಸ್ಸಿಂಗ್ ರೂಂನಿಂದ ಕೆಳಗಿಳಿದು ಡಗ್‌ಹೌಸ್‌ಗೆ ಬಂದು ದೀಪಕ್ ಸೋದರ ರಾಹುಲ್ ಚಾಹರ್ ಮೂಲಕ ಕ್ರೀಸಿನಲ್ಲಿದ್ದ ದೀಪಕ್‌ಗೆ ಸಂದೇಶವೊಂದನ್ನು ಕಳಿಸಿದ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss