MISS WORLD| ಬರೋಬ್ಬರಿ ಮೂರು ದಶಕಗಳ ಬಳಿಕ ಭಾರತದಲ್ಲಿ ನಡೆಯಲಿದೆ ʻವಿಶ್ವ ಸುಂದರಿ ಸ್ಪರ್ಧೆʼ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

27 ವರ್ಷಗಳ ನಂತರ ಅಂದರೆ ಸುಮಾರು 3 ದಶಕಗಳ ಬಳಿಕ ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸುತ್ತಿದೆ. 71ನೇ ವಿಶ್ವ ಸುಂದರಿ ಸ್ಪರ್ಧೆಯು ಮುಂದಿನ ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿದೆ ಎಂದು ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಸಿಇಒ ಜೂಲಿಯಾ ಮೊರ್ಲಿ ಘೋಷಿಸಿದ್ದಾರೆ. ಅನೇಕ ವಿಶೇಷತೆಗಳು ಮತ್ತು ವೈವಿಧ್ಯಮಯ ಸಂಸ್ಕೃತಿಗಳ ತವರು ಭಾರತದಲ್ಲಿ ಈ ಸಮಾರಂಭ ನಡೆಯುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಜೂಲಿಯಾ ಮೊರ್ಲಿ ಹೇಳಿದ್ದಾರೆ. 1996ರಲ್ಲಿ ಭಾರತದಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ನಡೆದಿತ್ತು.

ಈ ಸ್ಪರ್ಧೆಗಳು ಭಾರತದಲ್ಲಿ ನಡೆಯಲಿರುವುದರಿಂದ 130 ರಾಷ್ಟ್ರಗಳ ರಾಷ್ಟ್ರೀಯ ಚಾಂಪಿಯನ್ ಗಳು ಭಾರತದಲ್ಲಿ ಒಂದು ತಿಂಗಳು ಕಳೆಯಲಿದ್ದಾರೆ. ವಿಶ್ವ ಸುಂದರಿ ಸ್ಪರ್ಧೆಗಳಿಗೆ ಪ್ರಪಂಚದಾದ್ಯಂತ ಸಾಕಷ್ಟು ಕ್ರೇಜ್ ಇದೆ. ಪ್ರಪಂಚದಾದ್ಯಂತದ ಸುಂದರಿಯರು ತಮ್ಮ ಸೌಂದರ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಈ ಸ್ಪರ್ಧೆಗಳಿಗಾಗಿ ಕಾಯುತ್ತಾರೆ. ಈ ಸ್ಪರ್ಧೆಗಳನ್ನು ಆಯೋಜಿಸುವ ಅವಕಾಶ ಎಲ್ಲ ದೇಶಗಳಿಗೂ ಸಿಗುವುದಿಲ್ಲ. ಆದರೆ 2023 ರಲ್ಲಿ ಭಾರತಕ್ಕೆ ಅಂತಹ ಅವಕಾಶ ಸಿಕ್ಕಿದೆ.

ಸ್ಪರ್ಧೆಯ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದ ವಿಶ್ವ ಸುಂದರಿ ವಿಜೇತೆ ಕರೋಲಿನಾ ಬಿಲಾವ್ಸ್ಕಾ (ಪೋಲೆಂಡ್) ಈ ರೀತಿ ಹೇಳಿದ್ದಾರೆ.. “ಮಹಾನ್ ಆತಿಥ್ಯ ಮತ್ತು ಮೌಲ್ಯಗಳನ್ನು ಬಿಂಬಿಸುವ ಈ ಸುಂದರ ದೇಶದಲ್ಲಿ ಮುಂದಿನ ವಿಜೇತರಿಗೆ ನನ್ನ ಕಿರೀಟವನ್ನು ಹಸ್ತಾಂತರಿಸಲು ನಾನು ಎದುರು ನೋಡುತ್ತಿದ್ದೇನೆ.”ಎಂದರು. ಶೀಘ್ರದಲ್ಲೇ ದಿನಾಂಕ ಕೂಡ ಅಂತಿಮವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!