Saturday, August 13, 2022

Latest Posts

ಭಾರತವನ್ನು ರೈತಪ್ರಧಾನ ದೇಶವಾಗಿಸಲು ಸರ್ ಎಂ. ವಿಶ್ವೇಶ್ವರಯ್ಯ ಶ್ರಮಿಸಿದ್ದರು: ಎನ್.ವಿ.ಫಣೀಶ್

ಹೊಸ ದಿಗಂತ ವರದಿ, ಮೈಸೂರು:

ಭಾರತವನ್ನು ರೈತಪ್ರಧಾನ ದೇಶವಾಗಿಸಲು ಸರ್ ಎಂ.ವಿಶ್ವೇಶ್ವರಯ್ಯ ಶ್ರಮಿಸಿದ್ದರು ಎಂದು ಮೈಲಾಕ್ ನಿಗಮದ ಅಧ್ಯಕ್ಷ ಎನ್.ವಿ ಫಣೀಶ್ ತಿಳಿಸಿದರು.
ಭಾರತರತ್ನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ರವರ 161ನೇ ಜಯಂತಿಯ ಅಂಗವಾಗಿ, ಬುಧವಾರ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸರ್.ಎಂ ವಿಶ್ವೇಶ್ವರಯ್ಯ ವೃತ್ತದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿಗಳ ಬಳಗ ವತಿಯಿಂದ ಆಯೋಜಿಸಿದ್ದ “ಮೈಸೂರು ಸಂಸ್ಥಾನದಲ್ಲಿ ವಿಶ್ವೇಶ್ವರಯ್ಯ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಅವರ ಒಡನಾಟದಿಂದ ಮೈಸೂರು ಸಂಸ್ಥಾನದ ಅಭಿವೃದ್ಧಿಯತ್ತ ಸಾಗಿತ್ತು. ಆರ್ಥಿಕ ವ್ಯವಸ್ಥೆ ಹೆಚ್ಚಿಸಲು ಶ್ರೀಗಂಧ ಮರ ಉತ್ಪಾದನೆಯ ರಫ್ತಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ತಂದರು. ಸರ್.ಎಂ ವಿಶ್ವೇಶ್ವರಯ್ಯ ರ ಬಗ್ಗೆ ಯುವ ಪೀಳಿಗೆ ಇತಿಹಾಸ ತಿಳಿದುಕೊಳ್ಳಲು ಪ್ರವಾಸಿ ತಾಣಗಳಲ್ಲಿ ಅವರ ಆಡಳಿತ ಕಾಲದ ಬಗ್ಗೆ ಮಾಹಿತಿ ನಾಮಫಲಕ ಹಾಕಬೇಕಿದೆ ಎಂದರು.
ಸರ್.ಎಂ. ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮೈಸೂರಿನ ಮಹಾನಗರಪಾಲಿಕೆಯ ಮೇಯರ್ ಸುನಂದ ಪಾಲನೇತ್ರ ಮಾತನಾಡಿ, ಮೈಸೂರು ನಗರ ಸಾಂಸ್ಕೃತಿಕ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪರಿಕಲ್ಪನೆಗೆ ಪುಷ್ಠಿ ನೀಡಿದ ಯಂತ್ರ’ಋಷಿ ವಿಶ್ವೇಶ್ವರಯ್ಯ ರವರ ಕಾರ್ಯತಂತ್ರ ಆಡಳಿತ ವೈಖರಿ ಪ್ರಮುಖವಾದದು. ಶಿಕ್ಷಣ ನೀರಾವರಿ, ಕೃಷಿ, ಔದ್ಯಮಿಕ, ವಾಣಿಜ್ಯ, ಕೈಗಾರಿಕೋದ್ಯಮ, ಕಾರ್ಖಾನೆ, ವಿದ್ಯುತ್ ಸ್ಥಾವರ ಕನ್ನಡ ಭಾಷಾ ಕೊಡುಗೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದರು,
ನಂತರ ಕಾಂಗ್ರೆಸ್ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ಮಾತನಾಡಿ, ರಾಜ್ಯಸರ್ಕಾರ ಮುಂದಿನ ದಿನದಲ್ಲಿ ಸರ್.ಎಂ ವಿಶ್ವೇಶ್ವರಯ್ಯ ಜಯಂತಿಯನ್ನು ಆಚರಿಸಲು ಮುಂದಾಗಬೇಕು. ಅಭಿಯಂತರರು ರೈತವರ್ಗ ಇಂಜಿನಿಯರ್ಸ್ ವಿದ್ಯಾರ್ಥಿಗಳನ್ನ ಗುರುತಿಸಿ ಮುಖ್ಯವಾಹಿನಿಗೆ ತರುವಲ್ಲಿ ಹಲವಾರು ಯೋಜನೆಗಳನ್ನು ರೂಪಿಸಬೇಕು ಎಂದರು,
ಈ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್ ವಿ ರಾಜೀವ್,ಬಿಜೆಪಿ ನಗರ ಅಧ್ಯಕ್ಷ ಟಿ.ಎಸ್.ಶ್ರೀವತ್ಸ , ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಎಂ ಡಿ ನಾಗರಾಜ್,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ವಿಕ್ರಂ ಅಯ್ಯಂಗಾರ್ ,ಜೋಗಿ ಮಂಜು ,ಜಯಂತ್ ‘ವಿನಯ್ ಕಣಗಾಲ್ ,ಸೋಮಸುಂದರ್, ವಾಣಿಶ್ ಕುಮಾರ್ ,
ಪ್ರದೀಪ್ ಕುಮಾರ್ ,ವೆಂಕಟಸುಬ್ಬಯ್ಯ , ಸದಾಶಿವ ,ಸುಚೀಂದ್ರ ,ಕೆಆರ್ ಎಸ್ ವಿಜಯ್ ಕುಮಾರ್, ರಂಗನಾಥ್, ಮಹಿಂದ್ರ ಶೈವ ಚಕ್ರಪಾಣಿ ಇನ್ನಿತರರು ಹಾಜರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss