ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೆ ಪಂದ್ಯ ನಡೆಯುತ್ತಿದ್ದು, ಇಂದು ಮೂರನೇ ದಿನದ ಆಟಕ್ಕೆ ಅಭಿಮಾನಗಳು ಕಾತರರಾಗಿದ್ದಾರೆ.
ಪಂದ್ಯದ ಮೊದಲ ದಿನ ಭಾರತ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿತ್ತು. ಎರಡನೇ ದಿನ ಮಳೆಯಿಂದಾಗಿ ಆಟ ರದ್ದಾಗಿತ್ತು. ಇಂದು ಮತ್ತೆ ಬಿಸಿಲು ಮೂಡಿದ್ದು, ಆಟಕ್ಕೆ ಮೈದಾನ ಸಜ್ಜಾಗಿದೆ.
ಎರಡನೇ ದಿನವನ್ನು ಸರಿದೂಗಿಸಲು ಇಂದು ಒಟ್ಟು 98 ಓವರ್ಗಳು ನಡೆಯಲಿದೆ. ಈಗಾಗಲೇ ಕೆ.ಎಲ್ ರಾಹುಲ್ ಅದ್ಭುತ ಶತಕ ಬಾರಿಸಿದ್ದು, ಇಂದು ಕೂಡ ರಾಹುಲ್ ಆಡಲಿದ್ದಾರೆ.
ಮೊದಲ ದಿನದಲ್ಲಿ ಭಾರತದ 272 ರನ್ ಗಳಿಸಿತ್ತು. ಇಂದು ರಾಹುಲ್ ಹಾಗೂ ಅಜಿಂಕ್ಯ ಭಾರತದ ಇನ್ನಿಂಗ್ಸ್ನ್ನು ಮುಂದಕ್ಕೆ ಕೊಂಡೊಯ್ಯಲಿದ್ದಾರೆ.