ಜಡೇಜಾ ಶತಕದ ಬಲದಿಂದ ಬೃಹತ್‌ ಮೊತ್ತ ಕಲೆಹಾಕಿದ ಭಾರತ, ಲಂಕನ್ನರಿಗೆ ಆರಂಭಿಕ ಆಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೊಹಾಲಿಯ ಐಎಸ್‌ ಬಾಂದ್ರಾ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ನ ಎರಡನೇ ದಿನ ಆಲ್ ರೌಂಡರ್‌ ರವೀಂದ್ರ ಭರ್ಜರಿ ಶತಕದ ಬಲದಿಂದ ಭಾರತ ತಂಡವು ಬೃಹತ್‌ ಮೊತ್ತ ಕಲೆಹಾಕಿದೆ.
ಮೊದಲ ದಿನದಾಟದಂತ್ಯಕ್ಕೆ 357 ರನ್‌ ಗಳಿಗೆ ೬ ವಿಕೆಟ್‌ ಕಳೆದುಕೊಂಡಿದ್ದ ಭಾರತ ಶನಿವಾರ ಬ್ಯಾಟಿಂಗ್‌ ಮುಂದುವರೆಸಿ 574 ರನ್‌ ಗಳನ್ನು ಕಲೆಹಾಕಿದೆ. ನಿನ್ನೆ 45 ರನ್‌ ದಾಖಲಿಸಿ ಅಜೇಯರಾಗುಳಿದಿದ್ದ ಜಡೇಜಾ ಇಂದು 228 ಎಸೆತಗಳಲ್ಲಿ 3 ಸಿಕ್ಸರ್‌, 17 ಬೌಂಡರಿಗಳಿದ್ದ 175 ರನ್‌ ಸಿಡಿಸಿ ವಿಜೃಂಭಿಸಿದರು. ಅವರಿಗೆ ಸಾಥ್‌ ನೀಡಿದ ಆರ್.‌ ಅಶ್ವಿನ್‌ 61 ರನ್‌ ಸಿಡಿಸಿ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಶಮಿ 34 ಎಸೆತಗಳಲ್ಲಿ 20 ರನ್‌ ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಭಾರತ 8 ವಿಕೆಟ್‌ ಗಳ ನಷ್ಟಕ್ಕೆ 574 ರನ್‌ ಸಿಡಿಸಿ ಡಿಕ್ಲೇರ್‌ ಮಾಡಿಕೊಂಡಿದೆ. ಬೃಹತ್‌ ಮೊತ್ತವನ್ನು ಬೆನ್ನಟ್ಟುವ ವಿಶ್ವಾಸದೊಂದಿಗೆ ಬ್ಯಾಟಿಂಗ್‌ ಗೆ ಇಳಿದ ಲಂಕನ್ನರು ಆರಂಭಿಕ ಆಘಾತ ಅನುಭವಿಸಿದ್ದಾರೆ. ಆರಂಭಿಕರಾದ ಕರುಣಾರತ್ನೆ, ತಿರಿಮನ್ನೆ ಪೆವಿಲಿಯನ್‌ ಸೇರಿಕೊಂಡಿದ್ದು, 75ರನ್‌ ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ. ಸ್ಪಿನ್ನರ್‌ ಗಳಾದ ಜಡೇಜಾ, ಅಶ್ವಿನ್‌ ತಲಾ ಒಂದು ವಿಕೆಟ್‌ ಕಬಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!