Saturday, October 1, 2022

Latest Posts

ಈ ಮಾರ್ಗದ ಮೂಲಕ ಸರಕುಸಾಗಣೆಯಲ್ಲಿ ಭಾರತ ಹೊಸ ಕ್ರಾಂತಿ ಸೃಷ್ಟಿಸಲಿದೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರಕುಸಾಗಣೆ ಪ್ರಕ್ರಿಯೆಯ ನಕಲು ತಪ್ಪಿಸಲು ಹಾಗೂ ಕಾರ್ಯವಿಧಾನವನ್ನು ಸರಳೀಕರಿಸಲು ಸರಕುಸಾಗಣೆಗಳ ಎಲ್ಲಾ ವಿಧಾನಗಳಿಗೆ ಒಂದೇ ಲಾಜಿಸ್ಟಿಕ್‌ ಕಾನೂನನ್ನು ತರಲು ಸರ್ಕಾರ ಯೋಚಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಚಿವ ನಿತಿನ್‌ ಗಡ್ಕರಿ “ಪ್ರಕ್ರಿಯೆಗಳ ನಕಲು ಮತ್ತು ಕಾರ್ಯವಿಧಾನದ ಅವಶ್ಯಕತೆಗಳನ್ನು ಸರಳೀಕರಿಸಲು ಸರಕು ಸಾಗಣೆಯ ಎಲ್ಲಾ ವಿಧಾನಗಳಿಗೆ ಏಕರೂಪ ಲಾಜಿಸ್ಟಿಕ್ ಕಾನೂನನ್ನು ತರಲು ಸರ್ಕಾರವು ಕೆಲಸ ಮಾಡುತ್ತಿದೆ. ಈ ವ್ಯವಸ್ಥೆಯು ನಿಜವಾದ ಅರ್ಥದಲ್ಲಿ ಬಹು-ಮಾದರಿ ಸಾರಿಗೆಯನ್ನು ಸುಗಮಗೊಳಿಸುತ್ತದೆ” ಎಂದಿದ್ದಾರೆ.

“ಪ್ರಸ್ತುತ ಸಮಯದಲ್ಲಿ ಭಾರತದ ಲಾಜಿಸ್ಟಿಕ್‌ ವೆಚ್ಚವು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಸುಮಾರು 14 ಪ್ರತಿಶತದಷ್ಟಿದೆ . ಈ ವೆಚ್ಚವನ್ನು ಶೇಕಡಾ 8 ಕ್ಕೆ ಇಳಿಸುವುದು ಸರ್ಕಾರದ ಗುರಿಯಾಗಿದೆ. ಅಲ್ಲದೇ ವಾಯುಸರಕು (ಏರ್‌ಕಾರ್ಗೋ) ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಶಸ್ತ್ಯ ಕೊಡಲಾಗುವುದು. ವಾಯುಯಾನ ಮೂಲ ಸೌಕರ್ಯವನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಬೇಕು. ವಾಯು ಮಾರ್ಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕರೆ ಅದು ಸರಕು ಸಾಗಣೆಯಲ್ಲಿ ದೊಡ್ಡ ಬದಲಾವಣೆ ತರರಲು ಸಾಧ್ಯವಿದೆ” ಎಂದು ಹೇಳಿದ್ದಾರೆ

“ಏರ್ ಕಾರ್ಗೋವು ವೇಗದ ದೊಡ್ಡ ಪ್ರಯೋಜನವನ್ನು ಹೊಂದಿದೆ ನಮ್ಮಲ್ಲಿ ದೊಡ್ಡ ಹಾರಾಟದ ಸಾಮರ್ಥ್ಯವಿದೆ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಬಳಕೆಯನ್ನು ಸುಧಾರಿಸಬೇಕು. ಇಂಧನಗಳು, ತರಕಾರಿಗಳು, ಹೂವುಗಳು ಮತ್ತು ಸಮುದ್ರಾಹಾರ ಸಾಗಣೆಗೆ ದೇಶೀಯ ಏರ್ ಕಾರ್ಗೋ ಹೆಚ್ಚು ಸೂಕ್ತವಾಗಿದೆ” ಎಂದು ನಿತಿನ್‌ ಗಡ್ಕರಿ ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!