Wednesday, August 10, 2022

Latest Posts

ಪೆಂಟಗನ್‌ನ ಪ್ರಮುಖ ಹುದ್ದೆಗೆ ಭಾರತೀಯ ಮೂಲದ ವ್ಯಕ್ತಿ ನೇಮಕ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಮೂಲದ ಅಮೆರಿಕನ್‌ ಆಶೀಶ್‌ ವಜೀರಾನಿ ಅವರು, ಪೆಂಟಗನ್‌ನ ಪ್ರಮುಖ ಹುದ್ದೆಯೊಂದಕ್ಕೆ ಆಯ್ಕೆಯಾಗಿದ್ದಾರೆ.

ಆಶೀಶ್ ಅವರನ್ನು ರಕ್ಷಣಾ ಇಲಾಖೆಯ ಸಿಬ್ಬಂದಿ ಹಾಗೂ ಸನ್ನದ್ಧತೆ ವಿಭಾಗದ ಉಪ ಅಧೀನಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.

ಆಶೀಶ್, ಪ್ರಸ್ತುತ ‘ಎ2ಒ ಸ್ಟ್ರಾಟಜೀಸ್‌’ ಎಂಬ ಸಂಸ್ಥೆಯ ಪ್ರಾಚಾರ್ಯರಾಗಿ ಕಾರ್ಯ  ನಿರ್ವಹಿಸುತ್ತಿದ್ದಾರೆ.

ವಜೀರಾನಿ ಅವರು ಅಮೆರಿಕ ನೌಕಾಪಡೆಯಲ್ಲಿ 1986ರಿಂದ 1993ರ ವರೆಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎಂದು ಶ್ವೇತ ಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss