ಮಣಿಪುರ ಹಿಂಸಾಚಾರ: ಆನ್‌ಲೈನ್‌ನಲ್ಲಿ ನಕಲಿ ವೀಡಿಯೋಗಳ ಬಗ್ಗೆ ಸೇನೆ ಕಟ್ಟೆಚ್ಚರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬುಡಕಟ್ಟು ಗುಂಪುಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.  ಭಾರತೀಯ ಸೇನೆಯು ಅಧಿಕೃತ ಮತ್ತು ಪರಿಶೀಲಿಸಿದ ಮೂಲಗಳ ಮೂಲಕ ವಿಷಯವನ್ನು ಮಾತ್ರ ಅವಲಂಬಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದೆ.

ಮಣಿಪುರದ ಭದ್ರತಾ ಪರಿಸ್ಥಿತಿಯ ಕುರಿತು ಹಲವಾರು ನಕಲಿ ವೀಡಿಯೊಗಳನ್ನು ಪ್ರಸಾರ ಮಾಡುತ್ತಿರುವ ಬಗ್ಗೆ ಭಾರತೀಯ ಸೇನೆಯು ಎಚ್ಚರಿಕೆ ನೀಡಿದೆ.

“ಅಸ್ಸಾಂ ರೈಫಲ್ಸ್ ಪೋಸ್ಟ್‌ ಮೇಲಿನ ದಾಳಿಯ ವೀಡಿಯೊ ಸೇರಿದಂತೆ ಮಣಿಪುರದ ಭದ್ರತಾ ಪರಿಸ್ಥಿತಿಯ ಕುರಿತು ನಕಲಿ ವೀಡಿಯೊಗಳನ್ನು ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ದುರುದ್ದೇಶಪೂರಿತ ಅಂಶಗಳಿಂದ ಪ್ರಸಾರ ಮಾಡಲಾಗುತ್ತಿದೆ. ಅಧಿಕೃತ ಮತ್ತು ಪರಿಶೀಲಿಸಿದ ಮೂಲಗಳ ಮೂಲಕ ಮಾತ್ರ ವಿಷಯವನ್ನು ಅವಲಂಬಿಸುವಂತೆ ಭಾರತೀಯ ಸೇನೆ ವಿನಂತಿಸಿದೆ” ಎಂದು ಸ್ಪಿಯರ್‌ಕಾರ್ಪ್ಸ್ ಟ್ವೀಟ್ ಮಾಡಿದೆ.

ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ ಮತ್ತು ವಿವಿಧ ಸಮುದಾಯಗಳ ಸ್ವಯಂಸೇವಕರ ನಡುವೆ ಘರ್ಷಣೆಯ ಘಟನೆಗಳ ನಡುವೆ ಮಣಿಪುರದಲ್ಲಿ ಐದು ದಿನಗಳ ಕಾಲ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡು ಸಭೆಗಳನ್ನು ನಡೆಸಿ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರದ ಕುರಿತು ಮಣಿಪುರ ಮತ್ತು ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಸೇನೆಯೊಂದಿಗೆ ಬಿಎಸ್‌ಎಫ್, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ ನಿಯೋಜಿಸಲಾಗಿದ್ದು, ಅವಶ್ಯಕತೆಯಿದ್ದಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನೀಡುವುದಾಗಿ ಮೂಲಗಳು ತಿಳಿಸಿವೆ.

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಂಫಾಲ್ ಪಶ್ಚಿಮ, ಕಾಕ್ಚಿಂಗ್, ತೌಬಲ್, ಜಿರಿಬಾಮ್ ಮತ್ತು ಬಿಷ್ಣುಪುರ್ ಜಿಲ್ಲೆಗಳು ಮತ್ತು ಬುಡಕಟ್ಟು ಪ್ರಾಬಲ್ಯದ ಚುರಾಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ತೆಂಗ್‌ನೌಪಾಲ್ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!