ಸಮುದ್ರದಲ್ಲಿ ಮುಳುಗಿದ ಹಡಗು: 22 ಸಿಬ್ಬಂದಿಯ ರಕ್ಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್ ಕರಾವಳಿಯ ಸಮುದ್ರದಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 22ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ. ಎಂಟಿ ಗ್ಲೋಬಲ್ ಕಿಂಗ್ ಹೆಸರಿನ ವಾಣಿಜ್ಯ ಹಡಗು ಗುಜರಾತ್‌ನ ಪೋರುಬಂದರು ಕರಾವಳಿಯಿಂದ 93 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಹಡಗಿನಲ್ಲಿ ಸಿಲುಕಿದ್ದವರ ರಕ್ಷಣೆಗೆ ಮುಂದಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್ (ಐಜಿಸಿ) ಬೋಟ್‌ಗಳ ಜೊತೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಸೇರಿದ ಧ್ರುವ್ ಹೆಸರಿನ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ. ಬೋಟ್‌ ಹಾಗೂ ಹೆಲಿಕಾಪ್ಟರ್‌ ಮೂಲಕ ಹಡಗಿನಲ್ಲಿ ಸಿಲುಕಿದ್ದ ಎಲ್ಲಾ 22 ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ.

ಇವರಲ್ಲಿ, 20 ಮಂದಿ ಭಾರತೀಯರು, ಒಬ್ಬರು ಶ್ರೀಲಂಕಾ ಪ್ರಜೆ ಮತ್ತು ಇನ್ನೊಬ್ಬರು ಪಾಕಿಸ್ತಾನದವರು. ರಕ್ಷಿಸಿದವರನ್ನು ಪೋರು ಬಂದರ್ ಬಂದರಿಗೆ ಸ್ಥಳಾಂತರಿಸಲಾಗಿದೆ. ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ ಹಡಗು ನಿಯಂತ್ರಣ ಕಳೆದುಕೊಂಡು ಮುಳುಗಡೆಯಾಗಿದೆ. 6,000 ಟನ್ ಟಾರ್ ಹೊತ್ತ ಈ ಹಡಗು ಯುಎಇಯಿಂದ ಭಾರತದ ಕಾರವಾರ ಕರಾವಳಿಗೆ ಹೋಗುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!