ಭಾರತದ ಏಳು ಖ್ಯಾತ ಕ್ರಿಕೆಟಿಗರು ಢಾಕಾ ಪ್ರೀಮಿಯರ್‌ ಲೀಗ್‌ ನಲ್ಲಿ ಕಣಕ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್ ಹರಾಜಿನಲ್ಲಿ ಆಯ್ಕೆಯಾಗದೆ ಉಳಿದ ಭಾರತದ ಖ್ಯಾತನಾಮ ಆಟಗಾರರು ಢಾಕಾ ಪ್ರೀಮಿಯರ್ ಲೀಗ್‌ ನಲ್ಲಿ ಕಣಕ್ಕಿಳಿಯಲಿದ್ದಾರೆ.
ಢಾಕಾ ಪ್ರೀಮಿಯರ್ ಲೀಗ್ ಕೂಟವು ಬಾಂಗ್ಲಾದೇಶದ ಲಿಸ್ಟ್ ಎ ಕ್ರಿಕೆಟ್‌ ಟೂರ್ನಿಯಾಗಿದ್ದು, 50 ಓವರ್ ಗಳ ಪಂದ್ಯಗಳು ನಡೆಯುತ್ತವೆ. ಟೂರ್ನಿಯಲ್ಲಿ ಹತ್ತು ತಂಡಗಳು ಪಆಲ್ಗೊಳ್ಳುತ್ತಿದ್ದು, ಪ್ರತಿಯೊಂದು ತಂಡವು ಒಬ್ಬ ವಿದೇಶಿ ಆಟಗಾರನನ್ನು ಆಡಿಸಬಹುದಾಗಿದೆ. ಈ ಬಾರಿ ಈ ಟೂರ್ನಿಯಲ್ಲಿ ಭಾರತದ ಏಳು ಆಟಗಾರರು ಕಣಕ್ಕಿಳಿಯುವುದು ಖಚಿತವಾಗಿದೆ.
ಐಪಿಎಲ್‌ ತಂಡಗಳಲ್ಲಿ ಸ್ಥಾನ ಪಡೆಯದ ಹನುಮ ವಿಹಾರಿ, ಅಭಿಮನ್ಯು ಈಶ್ವರನ್, ಬಾಬಾ ಅಪರಾಜಿತ್, ಪರ್ವೇಜ್ ರಸೂಲ್, ಅಶೋಕ್ ಮೆನೇರಿಯಾ, ಚಿರಾಗ್ ಜಾನಿ, ಗುರಿಂದರ್ ಸಿಂಗ್ ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಭಾಗಿಯಾಗಲಿದ್ದಾರೆ.
ಈ ಹಿಂದೆ ದಿನೇಶ್ ಕಾರ್ತಿಕ್, ಮನೋಜ್ ತಿವಾರಿ, ಯೂಸುಫ್ ಪಠಾಣ್ ಈ ಕೂಟದಲ್ಲಿ ಭಾಗಿಯಾಗಿದ್ದರು. ಇವರ ಜೊತೆಗೆ ಪಾಕ್‌ ನ ಮೊಹಮ್ಮದ್ ಹಫೀಜ್, ಜಿಂಬಾಬ್ವೆಯ ಸಿಕಂದರ್ ರಾಜಾ ಕೂಡಾ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದಾರೆ. ಭಾರತದಲ್ಲಿ ದೇಶಿಯ ಕ್ರಿಕೆಟ್‌ ಋತು ಮುಗಿದು ಐಪಿಎಲ್‌ ಆರಂಭವಾಗುತ್ತಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಗದ ಆಟಗಾರರಿಗೆ ವಿದೇಶಿ ಕ್ಲಬ್ ಗಳಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!