ಭಾರತೀಯ ರೈಲ್ವೆಯ ಹೊಸ ಪ್ರಯೋಗ ‘ಬೇಬಿ ಬರ್ತ್​​’ ವಿಶಿಷ್ಟ ಸೌಲಭ್ಯ !

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಹೊಸ ಸೌಲಭ್ಯ ಪರಿಚಯ ಮಾಡಿದ್ದು , ಇದೀಗ ಕೆಲವೊಂದು ಆಯ್ದ ರೈಲುಗಳಲ್ಲಿ ಬೇಬಿ ಬರ್ತ್​​​ ವಿಶಿಷ್ಟ ಸೌಲಭ್ಯ ಪರಿಚಯ ಮಾಡಿದೆ. ಇದರಿಂದ ತಾಯಂದಿರು ತಮ್ಮ ಮಗುವಿನೊಂದಿಗೆ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.
ಭಾರತೀಯ ರೈಲ್ವೇ ಇಲಾಖೆಯ ಈ ನಿರ್ಧಾರಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ಈ ಸೌಲಭ್ಯ ಈಗಾಗಲೇ ಪ್ರಾಯೋಗಿಕವಾಗಿ ಆರಂಭವಾಗಿದೆ. ಉತ್ತರ ರೈಲ್ವೆಯ ಲಖನೌ ರೈಲ್ವೆ ಮಹಿಳೆಯರಿಗೋಸ್ಕರ ಈ ಉಡುಗೊರೆ ನೀಡಿದ್ದು, ಲಖನೌದಿಂದ ನವದೆಹಲಿಗೆ ಪ್ರಯಾಣಿಸುವ ಲಖನೌ ಮೇಲ್​​​​ ರೈಲಿನಲ್ಲಿ ಈ ಸೇವೆ ಪ್ರಾರಂಭಗೊಂಡಿದೆ.
ರೈಲಿನ AC-3 ಕೋಚ್​​ನ ಎರಡು ಆಸನಗಳು ಬೇಬಿ ಬರ್ತ್​​​ ಸೀಟು ಹೊಂದಿರುತ್ತವೆ. ಮಗುವಿಗೋಸ್ಕರ ತಯಾರು ಮಾಡಿರುವ ಆಸನ ಸುಲಭವಾಗಿ ಮಡಚಬಹುದಾಗಿದ್ದು, ತುಂಬಾ ಸುರಕ್ಷಿತವಾಗಿದೆ ಎಂದು ಉತ್ತರ ರೈಲ್ವೆ ಹೇಳಿಕೊಂಡಿದ್ದು, ಇದಕ್ಕೆ ಯಾವುದೇ ಹೆಚ್ಚಿನ ಶುಲ್ಕ ನೀಡಬೇಕಾಗಿಲ್ಲ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!