ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಸಾಹಿತ್ಯ ಜಗತ್ತಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ- 2021ಕ್ಕೆ ಗುರುತಿಸಿರುವ ಕಾದಂಬರಿಗಳ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಭಾರತೀಯ ಮೂಲದ ಬ್ರಿಟಿಷ್ ಲೇಖಕ ಸಂಜೀವ್ ಸಹೋತಾ ಅವರ ‘ಚೀನಾ ರೂಂ’ ಕಾದಂಬರಿಯೂ ಒಂದಾಗಿದೆ.
2021ರ ಬೂಕರ್ ಪ್ರಶಸ್ತಿಗೆ 13 ಕಾದಂಬರಿಗಳ ‘ದಿ ಬೂಕರ್ ಡಜನ್’ ಪಟ್ಟಿಯೊಂದನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ. ಐರ್ಲ್ಯಾಂಡ್ನಲ್ಲಿ ಪ್ರಕಟವಾದ 158 ಕಾದಂಬರಿಗಳ ಪೈಕಿ 13 ಕಾದಂಬರಿಗಳನ್ನು ತೀರ್ಪುಗಾರರು ಆರಿಸಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತ ಕಜುಯೋ ಇಶಿಗರೊ ಮತ್ತು ಪುಲಿಟ್ಜರ್ ಪ್ರಶಸ್ತಿ ವಿಜೇತ ರಿಚರ್ಡ್ ಪವರ್ಸ್ ಅವರ ಕಾದಂಬರಿಗಳು ಕೂಡ 13 ಕಾಂದಂಬರಿಗಳಲ್ಲಿ ಸ್ಥಾನ ಪಡೆದಿವೆ.
.