ಈ ದೈತ್ಯ ‌ಕಂಪನಿಯ ಸಿಇಒಗಳೆಲ್ಲಾ ನಮ್ಮ ಭಾರತದ ಮೂಲದವರೇ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ವಿಶ್ವದಲ್ಲಿ ಅನೇಕ ಟೆಕ್ ಕಂಪನಿಗಳಲ್ಲಿ ಭಾರತೀಯ ಮೂಲದ ಸಿಇಒಗಳಿದ್ದಾರೆ. ಇತ್ತೀಚೆಗೆ ನೀಲ್ ಮೋಹನ್ ಯೂಟ್ಯೂಬ್ ಸಿಇಒ ಆಗಿ ನೇಮಕಗೊಂಡಿದ್ದು ಗೊತ್ತೇ ಇದೆ. ಸುಸಾನ್ ವೊಜ್ಸಿಸ್ಕಿ ಯೂಟ್ಯೂಬ್‌ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ನೀಲ್ ಮೋಹನ್ ಅಧಿಕೃತವಾಗಿ ನೇಮಕಗೊಂಡರು. ಭಾರತೀಯರಲ್ಲಿ ಪ್ರತಿಭೆಗೆ ಕೊರತೆಯಿಲ್ಲ, ಭರತಮಾತೆಯ ಮಕ್ಕಳು ಟೆಕ್ ಕಂಪನಿಗಳ CEO ಗಳಾಗಿದ್ದು ಪ್ರಪಂಚದ ಮೇಲೆ ಮಹತ್ತರವಾಗಿ ಪ್ರಭಾವ ಬೀರುತ್ತಿದೆ.

ಸುಂದರ್ ಪಿಚೈ ಆಗಸ್ಟ್ 10, 2015 ರಿಂದ ಗೂಗಲ್ ಸಿಇಒ ಹಾಗೆಯೇ 2019 ರಿಂದ, ಆಲ್ಫಾಬೆಟ್ನ ಸಿಇಒ ಆಗಿಯೂ ಅಧಿಕಾರ ವಹಿಸಿಕೊಂಡರು. ಸತ್ಯ ನಾದೆಲ್ಲಾ 2014 ರಿಂದ ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡಿದ್ದಾರೆ. 2021 ರಿಂದ ಮತ್ತೊಮ್ಮೆ ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಅರವಿಂದ್ ಕೃಷ್ಣ ಅವರು 2020 ರಿಂದ IBM ನ CEO ಆಗಿದ್ದಾರೆ. 2021 ರಿಂದ, ಅವರು ಆ ಕಂಪನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಶಾಂತನು ನಾರಾಯಣ್ ಅವರು 2007 ರಿಂದ ಅಡೋಬ್ ಸಿಇಒ ಆಗಿ ನೇಮಕಗೊಂಡಿದ್ದಾರೆ. 2017 ರಿಂದ ಅವರು ಕಂಪನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಂಜಲಿ ಸೂದ್ ಅವರು 2021 ರಿಂದ “VMO” ನ CEO ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಥಾಮಸ್ ಕುರಿಯನ್ ಅವರು 2019 ರಿಂದ ಗೂಗಲ್ ಕ್ಲೌಡ್‌ನ ಸಿಇಒ ಆಗಿ ಮುಂದುವರೆದಿದ್ದಾರೆ. ದೇವಿಕಾ ಬುಲ್ಚಂದಾನಿ ಓಗಿಲ್ವಿಯ ಸಿಇಒ, ಜಾರ್ಜ್ ಕುರಿಯನ್ ನೆಟ್‌ಆಪ್‌ನ ಸಿಇಒ ಮತ್ತು ರಘು ರಘುರಾಮ್ ವಿಎಂವೇರ್‌ನ ಸಿಇಒ ಆಗಿ ಜಗತ್ತಿನಾದ್ಯಂತ ತಮ್ಮ ಹೆಸರಿನ ಜೊತೆಗೆ ಭೃತದ ಹೆಸರನ್ನೂ ಬೆಳಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!