ಸರಕು ಸಾಗಣೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಭಾರತೀಯ ರೇಲ್ವೆ: 1,000 ಮಿಲಿಯನ್ ಟನ್ ಸಾಗಣೆ, 1,08,593 ಕೋಟಿ ರೂ. ಗಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸರಕು ಸಾಗಣೆ ಕ್ಷೇತ್ರದಲ್ಲಿ ಭಾರತೀಯ ರೇಲ್ವೆ ಹೊಸ ಮೈಲಿಗಲ್ಲು ಸಾಧಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 1,000 ಮಿಲಿಯನ್ ಟನ್ ಗೂ ಅಧಿಕ ಸರಕುಗಳನ್ನು ಸಾಗಣೆ ಮಾಡುವ ಮೂಲಕ ಸರಕು ಸಾಗಣೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆಯು 1,002 MT ಸರಕುಗಳನ್ನು ಲೋಡ್ ಮಾಡಿದೆ. ಕಳೆದ FY ಅವಧಿಯಲ್ಲಿ ರೈಲ್ವೆಯು 926.4 MT ಸರಕು ಸಾಗಣೆಯನ್ನು ಸಾಧಿಸಿತ್ತು. ಪ್ರಸುತ ಈ ದಾಖಲೆಯನ್ನು ಹಿಂದಿಕ್ಕಿ ಕಳೆದ ವರ್ಷಕ್ಕಿಂತ 76.3 ಮಿಲಿಯನ್‌ ಟನ್‌ ಗಳಷ್ಟು ಅಂದರೆ ಸರಿ ಸುಮಾರು 8.25 ಶೇಕಡಾ ಬೆಳವಣಿಗೆ ದಾಖಲಿಸಿದೆ.

ಆದಾಯದ ಪರಿಭಾಷೆಯಲ್ಲಿ, ಸರಕು ಸಾಗಣೆ ಆದಾಯವು ಪ್ರಸಕ್ತ ವರ್ಷದಲ್ಲಿ 1,08,593 ಕೋಟಿ ರೂ.ಗೆ ಸಮೀಪದಲ್ಲಿದೆ ಇದು ಕಳೆದ ವರ್ಷದಲ್ಲಿ 93,532 ಕೋಟಿ ರೂ.ಗಳಷ್ಟಿತ್ತು.

ಸರಕುಗಳಲ್ಲಿ ಕಲ್ಲಿದ್ದಲಿನ ಸಾಗಣೆ ಪ್ರಮಾಣ ಹೆಚ್ಚಿದ್ದು ಎರಡನೇಯದಾಗಿ ಕಲ್ಲು, ಬೂದಿ, ಬಾಕ್ಸೈಟ್, ಲೋಹಗಳು, ಆಟೋಮೊಬೈಲ್ಗಳು, ಜಿಪ್ಸಮ್ ಉಪ್ಪು, ಉಪ್ಪು ಇತ್ಯಾದಿಗಳಂತಹ ಸರಕುಗಳಿವೆ, ಸಿಮೆಂಟ್‌ ಸಾಗಣೆಯು ಮೂರನೇ ಸ್ಥಾನದಲ್ಲಿದೆ.

‘ಹಂಗ್ರಿ ಫಾರ್ ಕಾರ್ಗೋ’ ಮಂತ್ರವನ್ನು ಅನುಸರಿಸಿ ವ್ಯಾಪಾರ ಮಾಡುವ ಸುಲಭತೆಯನ್ನು ಸುಧಾರಿಸಲು ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಸೇವೆಯ ವಿತರಣೆಯನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆಇದು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಎರಡರಿಂದಲೂ ರೈಲ್ವೆಗೆ ಹೊಸ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ಬರಲು ಸಹಾಯಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!