ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ವಿಶೇಷ ಆಸನದ ವ್ಯವಸ್ಥೆ: ಸಚಿವ ಅಶ್ವಿನಿ ವೈಷ್ಣವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನೇಕ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗಾಗಿ ವಿಶೇಷ ಆಸನಗಳನ್ನು ಸಿದ್ಧಪಡಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಬಸ್ ಮತ್ತು ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ವಿಶೇಷ ಸೀಟುಗಳನ್ನು ಮೀಸಲಿಡಲಾಗುತ್ತದೆ. ಇಂತಹ ಸೌಲಭ್ಯ ರೈಲುಗಳಲ್ಲಿ ಇರುವುದಿಲ್ಲ. ಮಹಿಳೆಯರ ಸೌಕರ್ಯ ಮತ್ತು ಸುರಕ್ಷತೆಗಾಗಿ ರೈಲ್ವೆ ಇಲಾಖೆ ಈ ಉಪಾಯ ಮಾಡಿದೆ.

ಭಾರತೀಯ ರೈಲ್ವೇ ಮಹಿಳಾ ಪ್ರಯಾಣಿಕರಿಗೆ ವಿಶೇಷ ಸೀಟುಗಳನ್ನು ನಿಯೋಜಿಸಲು ನಿರ್ಧರಿಸಿದೆ. ದೂರದ ಎಕ್ಸ್‌ಪ್ರೆಸ್ ರೈಲು ಬೋಗಿಗಳಲ್ಲಿ ಮಹಿಳೆಯರಿಗೆ ಆರು ಬೆರ್ತ್ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದು ರೈಲ್ವೆ ಸಚಿವರು ಹೇಳಿದರು. ಕೆಲ ಕಂಪಾರ್ಟ್ ಮೆಂಟ್ ಗಳಲ್ಲಿ ಮಹಿಳೆಯರಿಗೆ ಆರು‌ ವಿಶೇಷ ಆಸನಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಇದಲ್ಲದೇ ಮಹಿಳೆಯರ ಸುರಕ್ಷತೆಗೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ.

ಕೇಂದ್ರ ರೈಲ್ವೆ ಇಲಾಖೆಯು ಪ್ರತಿ ಸ್ಲೀಪರ್ ಕೋಚ್‌ನಲ್ಲಿ ಆರರಿಂದ ಏಳು ಲೋವರ್ ಬರ್ತ್‌ಗಳು, ಹವಾನಿಯಂತ್ರಿತ 3-ಟೈರ್ ಕೋಚ್‌ನಲ್ಲಿ 4 ರಿಂದ 5 ಲೋವರ್ ಬರ್ತ್‌ಗಳು ಮತ್ತು ಹವಾನಿಯಂತ್ರಿತ 2-ಟೈರ್ ಕೋಚ್‌ನಲ್ಲಿ 3 ರಿಂದ 4 ಲೋವರ್ ಬರ್ತ್‌ಗಳನ್ನು ಹಿರಿಯ ನಾಗರಿಕರಿಗೆ ಪ್ರತಿ ರೈಲಿನಲ್ಲಿ ಕಾಯ್ದಿರಿಸುತ್ತಿದೆ. ಇದಲ್ಲದೆ, ರೈಲಿನಲ್ಲಿ ಆ ವರ್ಗದ ಕೋಚ್‌ಗಳ ಸಂಖ್ಯೆಯನ್ನು ಆಧರಿಸಿ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಮತ್ತು ಗರ್ಭಿಣಿಯರಿಗೆ ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!