Friday, July 1, 2022

Latest Posts

ವಿರೋಧಕ್ಕೆ ತೆರೆ ಎಳೆದ ರೈಲ್ವೆ ಇಲಾಖೆ: ‘ರಾಮಾಯಣ ಎಕ್ಸ್ ಪ್ರೆಸ್’ ಸಿಬ್ಬಂದಿ ಕೇಸರಿ ಸಮವಸ್ತ್ರ ಬದಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

‍ಧಾರ್ಮಿಕ ಪ್ರವಾಸವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರಂಭವಾಗಿರುವ ರಾಮಾಯಣ ಯಾತ್ರ ವಿಶೇಷ ರೈಲಿನ ಸಿಬ್ಬಂದಿ ಕೇಸರಿ ಸಮವಸ್ತ್ರವನ್ನು ರೈಲ್ವೆ ಇಲಾಖೆ ಬದಲಾಯಿಸಿದೆ.
ರಾಮಾಯಣ ಯಾತ್ರ ರೈಲಿನಲ್ಲಿ ಸಿಬ್ಬಂದಿ ಕೇಸರಿ ಬಟ್ಟೆ, ರುದ್ರಾಕ್ಷಿ ಧರಿಸಿರುವುದನ್ನು ಉಜ್ಜಯಿನಿ ಹಿಂದೂ ಧಾರ್ಮಿಕ ಮುಖಂಡರು ವಿರೋಧಿಸಿದ್ದಾರೆ.
ರೈಲಿನ ಸಿಬ್ಬಂದಿ ಈ ಕೇಸರಿ ಸಮವಸ್ತ್ರದಲ್ಲಿ ಊಟ ಬಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ವಿವಾದ ಕೇಳಿಬಂದಿತು.
ಈ ಬಗ್ಗೆ ಉಜ್ಜಯಿನಿ ಅಖಾಡ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಮಾತನಾಡಿದ್ದು, ಸಿಬ್ಬಂದಿಗೆ ಕೇಸರಿ ಸಮವಸ್ತ್ರ, ಕೇಸರಿ ಬಣ್ಣದ ಕೈಗವಸು, ಮಾಸ್ಕ್ ನೀಡಲಾಗಿದೆ. ಸಾಧುಗಳು ಧರಿಸುವ ಕೇಸರಿ ವಸ್ತ್ರದ ಮಾದರಿಯಲ್ಲಿಯೇ ಸಿಬ್ಬಂದಿ ಸಮವಸ್ತ್ರ ಮತ್ತು ರುದ್ರಾಕ್ಷಿಯ ಮಾಲೆಗಳನ್ನು ಧರಿಸುವುದು ಹಿಂದೂ ಧರ್ಮ ಮತ್ತು ಅದರ ದಾರ್ಶನಿಕರಿಗೆ ಮಾಡುವ ಅವಮಾನವಾಗಿದೆ ಎಂದರು.
ಈ ವಿವಾದಕ್ಕೆ ತೆರೆ ಎಳೆದ ರೈಲ್ವೆ ಇಲಾಖೆ, ಸಮವಸ್ತ್ರ ಬದಲಾಯಿಸುವುದಾಗಿ ತಿಳಿಸಿ ಕ್ಷಮೆ ಕೋರಿದೆ. ಸೇವಾ ಸಿಬ್ಬಂದಿ ಇಂತಹ ವಿವಾದಕ್ಕೆ ಕಾರಣವಾಗದಿರಲು, ಸಮವಸ್ತ್ರವನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಮಂಡಳಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss