ಗುಜುರಿ ಮಾರಾಟದಿಂದ ಬರೋಬ್ಬರಿ 2,582 ಕೋಟಿ ರೂ. ಲಾಭಗಳಿಸಿದ ರೈಲ್ವೆ ಇಲಾಖೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತೀಯ ರೈಲ್ವೆ ಇಲಾಖೆಯು 2022-23ನೇ ಸಾಲಿನ ಹಣಕಾಸು ವರ್ಷದ ಮೊದಲ 6 ತಿಂಗಳುಗಳಲ್ಲಿ ಗುಜರಿ ಮಾರಾಟದಿಂದ ಬರೋಬ್ಬರಿ 2,582 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ಇದೇ ಅವಧಿಯಲ್ಲಿಇಲಾಖೆ 2003 ಕೋಟಿ ರೂಪಾಯಿಗಳ ಲಾಭಗಳಿಸಿತ್ತು. ಈ ವರ್ಷದ ಸೆಪ್ಟೆಂಬರ್ ವರೆಗೆ ಒಟ್ಟು 2582 ಕೋಟಿ ಗಳಿಸಿದೆ, ಇದು ಶೇಕಡಾ 29 ರಷ್ಟು ಹೆಚ್ಚಾಗಿದೆ” ಎಂದು ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಮುಂದಿನ ಸಾಲಿನಲ್ಲಿ ಗುಜರಿ ವಸ್ತುಗಳ ಮಾರಾಟದ ಮೂಲಕ 4400 ಕೋಟಿ ರೂ. ಲಾಭ ಗಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಇಲಾಖೆ ಹೇಳಿದೆ.
2022-23ರಲ್ಲಿ 3,93,421 ಮೆಟ್ರಿಕ್ ಟನ್ ಗುಜರಿಯನ್ನು ವಿಲೇವಾರಿ ಮಾಡಲಾಗಿದೆ. 2022-23ರಲ್ಲಿ 1751 ವ್ಯಾಗನ್‌ಗಳು, 1421 ಕೋಚ್‌ಗಳು ಮತ್ತು 97 ಲೊಕೋಗಳನ್ನು ವಿಲೇವಾರಿ ಮಾಡಲಾಗಿದೆ.
ಗುಜರಿ ಮಾರಾಟದಿಂದ ಬಂದ ಹಣವನ್ನು ಹೊಸ ರೈಲ್ವೆ ಹಳಿಗಳನ್ನು ಹಾಕುವುದು, ಹಳೆಯ ಹಳಿಗಳನ್ನು ಪರಿವರ್ತಿಸುವುದು, ಹಳೆಯ ಇಂಜಿನ್‌ಗಳು, ಕೋಚ್‌ಗಳು ಮತ್ತು ವ್ಯಾಗನ್‌ಗಳ ನವೀಕರಣ, ಮಾರ್ಗಗಳು ಮತ್ತು ತ್ಯಾಜ್ಯ ವಸ್ತುಗಳ ತ್ವರಿತ ವಿದ್ಯುದ್ದೀಕರಣ, ಡೀಸೆಲ್ ಇಂಜಿನ್‌ಗಳನ್ನು ಕೊಳ್ಳುವುದು ಸೇರಿದಂತೆ ಹಲವು ಕಾರ್ಯಗಳಿಗೆ ಬಳಸಿಕೊಳ್ಳಲಾಗುಇತ್ತಿದೆ. ಗುಜರಿ ಮಾರಾಟವು ಇಲಾಖೆ ದೊಡ್ಡ ಆದಾಯವನ್ನು ತಂದುಕೊಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!