ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………….
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಸಾಗಣೆ ಮಾಡುವ ಸಲುವಾಗಿ ಭಾರತೀಯ ರೈಲ್ವೆಯು ಬುಧವಾರದವರೆಗೆ 100 ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲುಗಳ ಕಾರ್ಯಾಚರಣೆ ನಡೆಸಿದೆ.
ಏ. 19ರಂದು ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲುಗಳ ಸಂಚಾರ ಆರಂಭಗೊಂಡಿದ್ದು, ಈ ವರೆಗೆ ವಿವಿಧ ರಾಜ್ಯಗಳಿಗೆ 396 ಟ್ಯಾಂಕರ್ಗಳ ಮೂಲಕ 6,260 ಟನ್ ದ್ರವೀಕೃತ ವೈದ್ಯಕೀಯ ಆಮ್ಲಜನಕ ತಲುಪಿಸಲಾಗಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.
ಏ. 19ರಂದು ಕಾರ್ಯಾಚರಣೆ ಆರಂಭಗೊಂಡಾಗ, ಮೊದಲ ‘ಆಕ್ಸಿಜನ್ ಎಕ್ಸ್ಪ್ರೆಸ್’ ರೈಲು ಜಾರ್ಖಂಡ್ನ ಟಾಟಾನಗರದಿಂದ ಉತ್ತರಾಖಂಡಕ್ಕೆ 120 ಟನ್ ಆಮ್ಲಜನಕ ಸಾಗಿಸಿತು. ಅದೇ ದಿನ ಮತ್ತೊಂದು ರೈಲು ಒಡಿಶಾದ ಅಂಗೂಲ್ನಿಂದ ಪುಣೆಗೆ 50 ಟನ್ ಆಮ್ಲಜನಕ ಹೊತ್ತೊಯ್ದಿತು ಎಂದೂ ಪ್ರಕಟಣೆ ತಿಳಿಸಿದೆ.