ಭಾರತ-ಬಾಂಗ್ಲಾದೇಶ ನಡುವಿನ ರೈಲು ಸೇವೆ ಇಂದಿನಿಂದ ಮತ್ತೆ ಪ್ರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೊರೋನಾ ಸಾಂಕ್ರಾಮಿಕದ ಕಾರಣದಿಂದಾಗಿ ಸುದೀರ್ಘ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪ್ರಯಾಣಿಕರ ರೈಲು ಸೇವೆಗಳು ಮೇ 29 ರಿಂದ ಪುನರಾರಂಭಗೊಳ್ಳಲಿವೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಈ ಕ್ರಮವು ಭಾರತ ಮತ್ತು ಬಾಂಗ್ಲಾದೇಶ ಎರಡೂ ದೇಶಗಳ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಗುರಿಯನ್ನು ಹೊಂದಿದೆ.
ʼಕೋಲ್ಕತ್ತಾ – ಢಾಕಾ – ಕೋಲ್ಕತ್ತಾ ಮೈತ್ರೀ ಎಕ್ಸ್‌ಪ್ರೆಸ್ ಮತ್ತು ಕೋಲ್ಕತ್ತಾ – ಖುಲ್ನಾ – ಕೋಲ್ಕತ್ತಾ ಬಂಧನ್ ಎಕ್ಸ್‌ಪ್ರೆಸ್‌ ರೈಲುಗಳು ಮೇ 29 ರಿಂದ ಸೇವೆಗಳನ್ನು ಪುನರಾರಂಭಿಸಲಿವೆ” ಎಂದು ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲಬ್ಯ ಚಕ್ರವರ್ತಿ ತಿಳಿಸಿದ್ದಾರೆ.
ಮತ್ತೊಂದು ರೈಲು ಮಿತಾಲಿ ಎಕ್ಸ್‌ಪ್ರೆಸ್ ಜೂನ್ 1 ರಿಂದ ಢಾಕಾ ಸಂಚಾರ ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರೈಲುಗಳಿಗೆ ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ ಮತ್ತು ಎಲ್ಲಾ ಟಿಕೆಟ್‌ ಗಳು ಈಗಾಗಲೇ ಮಾರಾಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!