ಮಾ.31ರಿಂದ ಭಾರತ ನೇಪಾಳ ಆಸ್ತಾ ಯಾತ್ರೆ ಆರಂಭಿಸಲಿದೆ ಭಾರತೀಯ ರೈಲ್ವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಮಾ.೩೧ರಿಂದ ಭಾರತ ನೇಪಾಳ ಆಸ್ತಾ ಯಾತ್ರೆ ಆರಂಭಿಸಲಿದೆ.

‘ದೇಖೋ ಅಪ್ನಾ ದೇಶ್’ ಉಪಕ್ರಮದಿ ಭಾರತ ನೇಪಾಳ ಆಸ್ತಾ ಯಾತ್ರೆ ಆಯೋಜಿಸಲಾಗಿದ್ದು, ಭಾರತ್ ಗೌರವ್ ಟೂರಿಸ್ಟ್ ರೈಲಿನ ಮೂಲಕ ಯಾತ್ರೆ ಆರಂಭವಾಗಲಿದೆ.

ಭಾರತೀಯ ರೈಲ್ವೆ ಕಂಪನಿ ಐಆರ್‌ಸಿಟಿಸಿ ನೇಪಾಳ, ಅಯೋಧ್ಯೆ, ಪ್ರಯಾಗ್‌ರಾಜ್ ಮತ್ತು ವಾರಣಾಸಿಗೆ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಿಸಲಾಗುತ್ತದೆ. ಅಯೋಧ್ಯೆ, ಪ್ರಯಾಗ್‌ರಾಜ್‌ನಿಂದ ಕಠ್ಮಂಡುವರೆಗಿನ ದೇಗುಲಗಳಿಗೆ 30,000 ಸಾವಿರ ರೂಪಾಯಿಗಳಿಗಿಂತ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಬಹುದಾಗಿದೆ.

ಒಟ್ಟಾರೆ ಪ್ರವಾಸದ ಅವಧಿ ಒಟ್ಟಾರೆ ಒಂಬತ್ತು ರಾತ್ರಿಗಳು ಹಾಗೂ 10 ದಿನಗಳಾಗಿರುತ್ತದೆ. ಟೂರ್ ಪ್ಯಾಕೇಜ್‌ನಲ್ಲಿ ರೈಲು,ಬಸ್, ಹೊಟೇಲ್, ತಂಗುವಿಕೆ ಮತ್ತು ಆಹಾರವನ್ನು ಒಳಗೊಂಡಿದೆ. ಜಲಂಧರ್‌ನಿಂದ ಪ್ರವಾಸ ಆರಂಭವಾಗಲಿದ್ದು, ಮೊದಲ ದಿನ ರೈಲು ಲುಧಿಯಾನ, ಚಂಡೀಗಢ, ಅಂಬಾಲ, ಕುರುಕ್ಷೇತ್ರ, ಪಾಣಿಪತ್,ದೆಹಲಿ, ಸಫ್ದರ್‌ಜಂಗ್, ಗಾಜಿಯಾಬಾದ್, ಅಲಿಗಢ, ತುಂಡಿಯಾ, ಕಾನ್ಪುರದ ಮೂಲಕ ಹಾದುಹೋಗುತ್ತದೆ. ರೈಲಿನ 3ಎಸಿ ಕೋಚ್ ಇದಕ್ಕಾಗಿ ಮೀಸಲಿಡಲಾಗಿದೆ.

ಸುಪೀರಿಯರ್ ಟೂರ್ ಪ್ಯಾಕೇಜ್‌ನಲ್ಲಿ ಬಜೆಟ್ ಹೊಟೇಲ್‌ಗಳಲ್ಲಿ ಎಸಿ, ನಾನ್ ಎಸಿ ಕೊಠಡಿಗಳು ಲಭ್ಯವಿರುತ್ತವೆ. ನಾನ್ ಎಸಿ ಬಸ್ ಲಭ್ಯವಿದ್ದು, ಸಸ್ಯಾಹಾರ ಮಾತ್ರ ನೀಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!