ಹೊಸದಿಗಂತ ಆನ್ಲೈನ್ ಡೆಸ್ಕ್:
ಚೆನ್ನೈ ಮೂಲದ ಫ್ರೆಶ್ವರ್ಕ್ ಕಂಪನಿಯ 500 ಕ್ಕೂ ಹೆಚ್ಚು ಉದ್ಯೋಗಿಗಳು ಇದ್ದಕ್ಕಿದ್ದಂತೆಯೇ ಮಿಲೇನಿಯರ್ಗಳಾಗಿದ್ದಾರೆ.
ಹೌದು, ನಾಸ್ಡಾಕ್ನಲ್ಲಿ ಫ್ರೆಶ್ವರ್ಕ್ ಕಂಪನಿಯ ಹೆಸರನ್ನು ಪಟ್ಟಿ ಮಾಡಲಾಗಿದ್ದು, ಇದೀಗ ಕಂಪನಿ ಉದ್ಯೋಗಿಗಳು ಮಿಲೇನಿಯರ್ಗಳಾಗಿದ್ದಾರೆ.
ಗ್ರಾಹಕ ಸೇವಾ ಸಾಫ್ಟ್ವೇರ್ ತಯಾರಕ ಫ್ರೆಶ್ವರ್ಕ್ ಕಂಪನಿಯನ್ನು ಬುಧವಾರ ನಾಸ್ಡಾಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿ ಮಾಡಲಾಗಿದೆ.
ಚೆನ್ನೈನಲ್ಲಿ ಸ್ಥಾಪನೆಯಾದ ಮತ್ತು ಇದೀಗ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಕಂಪನಿ ಸಾರ್ವಜನಿಕರಿಂದ ಒಂದು ಬಿಲಿಯನ್ ಡಾಲರ್ಗೂ ಹೆಚ್ಚು ಹಣ ಸಂಗ್ರಹಿಸಿದೆ.
ಮಾರುಕಟ್ಟೆಯಲ್ಲಿ ಕಂಪನಿಯ ಮೌಲ್ಯ 10 ಬಿಲಿಯನ್ ಡಾಲರ್ಗೂ ಹೆಚ್ಚಿದೆ. ಟೈಮ್ಸ್ ಆಫ್ ಇಂಡಿಯಾದ ವರದ ಅನ್ವಯ ಈ ಕಂಪನಿಯ ಸುಮಾರು 500 ಕ್ಕೂ ಹೆಚ್ಚು ಉದ್ಯೋಗಿಗಳು ಮಿಲೇನಿಯರ್ಗಳಾಗಿದ್ದಾರೆ.
ವರದಿಯ ಪ್ರಕಾರ ಕಂಪನಿಯ ಷೇರು ಬುಧವಾರ ಪ್ರತಿ ಷೇರುಗೆ $46,7ರ ಗರಿಷ್ಠ ವಹಿವಾಟು ನಡೆಸಿದೆ. ಇದು $36ರ ಪಟ್ಟಿ ಬೆಲೆಗಿಂತ ಶೇ.30ರಷ್ಟು ಹೆಚ್ಚಾಗಿದೆ.
ಈ ಕಂಪನಿಯ ಐಪಿಎ 28.5 ಮಿಲಿಯನ್ ಷೇರುಗಳ ವಿತರಣೆಯನ್ನು ಒಳಗೊಂಡಿದೆ ಮತ್ತು ಐಪಿಒ ಬೆಲೆಯು ಆ ದಿನದ ಪ್ರತಿ ಷೇರಿಗೆ $32ರಿಂದ $34ರ ನಿರೀಕ್ಷಿತ ಬೆಲೆ ಶ್ರೇಣಿಯ ಮೇಲ ಆಧರಿತವಾಗಿದೆ.
ಈ ಬಗ್ಗೆ ಫ್ರೆಶ್ವರ್ಕ್ಸ್ನ ಸಂಸ್ಥಾಪಕ ಗಿರೀಶ್ ಮಾತೃಭೂತಂ ಮಾತನಾಡಿದ್ದು, ಚೆನ್ನೈನಲ್ಲಿ ಕಂಪನಿ ಆರಂಭಿಸಿದಾಗ ಇದರ ನಿರೀಕ್ಷೆ ಇರಲಿಲ್ಲ. ಆದರೆ ನಾವು ನಮ್ಮ ಕನಸನ್ನು ಸಾಕಾರಗೊಳಿಸುವಲ್ಲಿ ಸಫಲರಾಗಿದ್ದೇವೆ ಎಂದಿದ್ದಾರೆ.