ಮೌಂಟ್ ಎವರೆಸ್ಟ್​ ಏರಲು ತೆರಳಿದ್ದ ಭಾರತೀಯ ಮಹಿಳಾ ಪರ್ವತಾರೋಹಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್‌ನಲ್ಲಿ ಭಾರತೀಯ ಮಹಿಳಾ ಪರ್ವತಾರೋಹಿಯೊಬ್ಬರು ಗುರುವಾರ ಸಾವನ್ನಪ್ಪಿದ್ದಾರೆ. 59 ವರ್ಷದ ಮಹಿಳಾ ಪರ್ವತಾರೋಹಿಗೆ ಅನಾರೋಗ್ಯದ ಕಾರಣ ಪೇಸ್ ಮೇಕರ್ ಅಳವಡಿಸಲಾಗಿತ್ತು. ಪೇಸ್ ಮೇಕರ್ ಮೂಲಕ ಮೌಂಟ್ ಎವರೆಸ್ಟ್ ಏರುವ ಮೂಲಕ ವಿಶ್ವ ದಾಖಲೆ ‌ ಮಾಡಲು ಬಯಸಿದ್ದರು. ಆದರೆ ಅನಾರೋಗ್ಯದ ಕಾರಣ ಅವರು ಮೃತಪಟ್ಟಿದ್ದಾರೆ.

ನೇಪಾಳದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಯುವರಾಜ್ ಖತಿವಾಡ, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರುವ ಮೊದಲು ಸುಝೇನ್ ಲಿಯೋಪೋಲ್ಡಿನಾ ಜೀಸಸ್ ಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದರಿಂದಾಗಿ ಅವರನ್ನು ಸೋಲುಕುಂಬು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಗುರುವಾರ ನಿಧನರಾದರು ಎಂದು ಮಾಹಿತಿ ನೀಡಿದ್ದಾರೆ.

ಪೇಸ್‌ಮೇಕರ್‌ನೊಂದಿಗೆ ಮೌಂಟ್ ಎವರೆಸ್ಟ್ ಅನ್ನು ಹತ್ತಿದ ಏಷ್ಯಾದ ಮೊದಲ ಮಹಿಳೆ ಎಂಬ ವಿಶ್ವ ದಾಖಲೆಯನ್ನು ಮಾಡಲು ಬಯಸಿದ್ದಾಗಿ ಅವರು ಹೇಳಿದರು.

ಸುಝೇನ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಶುಕ್ರವಾರ ಅವರು ಕಠ್ಮಂಡು ತಲುಪಲಿದ್ದಾರೆ. ಈ ವರ್ಷ ಮೌಂಟ್ ಎವರೆಸ್ಟ್ ಏರುವಾಗ ಸಂಭವಿಸಿದ 8ನೇ ಸಾವು ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!