ಕಾಮನ್‌ ವೆಲ್ತ್‌ ಗೇಮ್ ಹಾಕಿಯಲ್ಲಿ ಭಾರತದ ವನಿತೆಯರ ಭರ್ಜರಿ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಭಾರತೀಯ ಮಹಿಳಾ ಹಾಕಿ ತಂಡವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಘಾನಾ ವಿರುದ್ಧ 5-0 ಗೋಲುಗಳಿಂದ ಜಯ ಸಾಧಿಸುವ ಮೂಲಕ ತನ್ನ ಅಭಿಯಾನವನ್ನು ಭರ್ಜರಿಯಾಗಿ ಪ್ರಾರಂಭಿಸಿದೆ.
ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತವು 30ನೇ ರ್ಯಾಂಕಿಂಗ್‌ ನ ಘಾನಾ ವಿರುದ್ಧ ಸುಲಭ ಗೆಲುವು ದಾಖಲಿಸಿತು.  ಭಾರತದ ಪರ ಗುರ್ಜಿತ್ ಕೌರ್ ಎರಡು ಮನಮೋಹಕ ಗೋಲುಗಳನ್ನು (3, 39 ನೇ ನಿಮಿಷ) ಗಳಿಸಿದರು. ನೇಹಾ (28 ನೇ ನಿಮಿಷ), ಸಂಗೀತಾ ಕುಮಾರಿ (36), ಮತ್ತು ಸಲಿಮಾ ಟೆಟೆ (56 ನೇ ನಿಮಿಷ)  ತಲಾ ಒಂದು ಗೋಲು ಗಳಿಸಿ ಭಾರತದ ಗೆಲುವಿಗೆ ಕೊಡುಗೆ ನೀಡಿದರು. ಭಾರತವು ಇಂದು ತನ್ನ ಎರಡನೇ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಎದುರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!