ವಾಯು ಮಾಲಿನ್ಯ| ಭಾರತೀಯರ 5 ವರ್ಷಗಳ ಸರಾಸರಿ ಜೀವಿತಾವಧಿ ಕುಸಿತ-ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ವಾಯುಮಾಲಿನ್ಯದಿಂದ ಭಾರತೀಯರ ಸರಾಸರಿ ಜೀವಿತಾವಧಿ ಐದು ವರ್ಷಗಳಷ್ಟು ಕುಸಿಯುತ್ತಿದೆ. ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ಕಂಪನಿ ನಡೆಸಿರುವ ಅಧ್ಯಯನದಲ್ಲಿ ಆತಂಕಕಾರಿ ವಿಚಾರ ಬಹಿರಂಗವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಧ್ಯಯನವನ್ನು ಒಪ್ಪಿಕೊಂಡಿದ್ದು, ದೇಶದಲ್ಲಿ ವಾಯು ಮಾಲಿನ್ಯವು ಐದು ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂದಿದೆ. ವಾಯು ಮಾಲಿನ್ಯ ಪ್ರಪಂಚದಾದ್ಯಂತ ಸರಾಸರಿ 2.2 ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಮದ್ಯಪಾನ ಅಥವಾ ಕಲುಷಿತ ನೀರು ಸೇವನೆಯಿಂದ ಆಗುವ ಸಾವುಗಳಿಗಿಂತ ವಾಯುಮಾಲಿನ್ಯದಿಂದ ಆಗುವ ಸಾವು ಮೂರು ಪಟ್ಟು ಹೆಚ್ಚು ಎಂದಿದೆ.

ದಕ್ಷಿಣ ಏಷ್ಯಾವು ವಿಶ್ವದಲ್ಲೇ ಅತಿ ಹೆಚ್ಚು ವಾಯು ಮಾಲಿನ್ಯವನ್ನು ಹೊಂದಿದ್ದು, ಇಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವಾಯು ಮಾಲಿನ್ಯದಿಂದ ಬಳಲುತ್ತಿದ್ದಾರೆ. 2013ರಿಂದೀಚೆಗೆ ವಾಯು ಮಾಲಿನ್ಯ ಶೇ.44ರಷ್ಟು ಏರಿಕೆಯಾಗಿದೆ. ಇದು ಹೀಗೆ ಮುಂದುವರಿದರೆ ಜನರ ಆಯುಷ್ಯ ಐದು ವರ್ಷ ಕಡಿಮೆಯಾಗುವುದರಲ್ಲಿ ಅನುಮಾನವೇ ಇಲ್ಲ. 1998ರಿಂದೀಚೆಗೆ ನಮ್ಮ ದೇಶದಲ್ಲಿ ವಾಯುಮಾಲಿನ್ಯ ಶೇ.61.4ರಷ್ಟು ಹೆಚ್ಚಾಗಿದ್ದು, ಈ ಮೂಲಕ ವಿಶ್ವದ ಎರಡನೇ ಅತ್ಯಂತ ಕಲುಷಿತ ರಾಷ್ಟ್ರವಾಗಿ ಹೊರಹೊಮ್ಮಿದೆ.

ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ವಾಯು ಮಾಲಿನ್ಯದ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಮಾಲಿನ್ಯ ಹೆಚ್ಚಾಗಿದೆ. ದೆಹಲಿಯು ಅತ್ಯಂತ ಕಲುಷಿತ ರಾಜ್ಯವಾಗಿದ್ದು, ಉತ್ತರ ಪ್ರದೇಶ, ಬಿಹಾರ, ಹರಿಯಾಣ, ತ್ರಿಪುರಾ, ಪಂಜಾಬ್, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ರಾಜಸ್ಥಾನ ನಂತರದ ಸ್ಥಾನದಲ್ಲಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!