ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್;
ಭಾರತ ತಂಡದ ಕ್ರಿಕೆಟ್ ಆಟಗಾರ ಆಲ್ರೌಂಡರ್ ಸ್ಟುವರ್ಟ್ ಬಿನ್ನಿಅಂತಾರಾಷ್ಟ್ರೀಯ ಹಾಗೂ ಮೊದಲ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ.
‘ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದಕ್ಕೆ ಹೆಮ್ಮೆ ಇದೆ . ನನ್ನ ಕ್ರಿಕೆಟ್ ಜೀವನದ ಪ್ರಯಾಣ ಅಭೂತಪೂರ್ವವಾಗಿತ್ತು. ಇದಕ್ಕಾಗಿ ಬಿಸಿಸಿಐ, ನನ್ನ ಕುಟುಂಬ ಸೇರಿದಂತೆ ಪ್ರತಿಯೊಬ್ಬರಿಗೂ ಆಭಾರಿಯಾಗಿರುತ್ತೇನೆ’ ಎಂದು ಸ್ಟುವರ್ಟ್ ಬಿನ್ನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮೊದಲ ದರ್ಜೆ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುತ್ತಿರುವುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ’ ಎಂದಿದ್ದಾರೆ
ಸ್ಟುವರ್ಟ್ ಬಿನ್ನಿ 2014 ರಲ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟಿದ್ದು, 6 ಟೆಸ್ಟ್ ಪಂದ್ಯ, 14 ಏಕದಿನ ಅಂತರರಾಷ್ಟ್ರೀಯ ಪಂದ್ಯ, 3 ಅಂತರರಾಷ್ಟ್ರೀಯ ಟಿ20 ಪಂದ್ಯ, 150 ಐಪಿಎಲ್ ಪಂದ್ಯ ಹಾಗೂ 100 ಕ್ಕೂ ಹೆಚ್ಚು ದೇಶಿ ಕ್ರಿಕೆಟ್ ಟೂರ್ನಿಗಳನ್ನು ಆಡಿದ್ದಾರೆ.
ಐಪಿಎಲ್ ನಲ್ಲೂ ಸಕ್ರಿಯರಾಗಿದ್ದ ಸ್ಟುವರ್ಟ್, ಮುಂಬೈ ಇಂಡಿಯನ್ಸ್, ಆರ್ ಸಿಬಿ, ಆರ್ ಆರ್ ತಂಡಗಳಲ್ಲಿ ಆಡಿದ್ದರು.